

ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ಸುರಿದ ಮಳೆಗೆ ಚಿತ್ರದುರ್ಗ ತಾಲೂಕಿನಲ್ಲಿ 2, ಹೊಸದುರ್ಗ, ಹೊಳಲ್ಕೆರೆ ತಲಾ 3, ಹಿರಿಯೂರು, ಮೊಳಕಾಲ್ಮುರು ತಾಲೂಕಿನಲ್ಲಿ ತಲಾ 1 ಸೇರಿ ಒಟ್ಟು 10 ಮನೆಗಳು ಭಾಗಶಃ ಹಾನಿಯಾಗಿದೆ. ಇಕ್ಕನೂರಿನಲ್ಲಿ 88.8 ಮಿ.ಮೀ ಮಳೆಯಾಗಿದ್ದು, ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.
ಹಿರಿಯೂರಿನಲ್ಲಿ 38.6 ಮಿ.ಮೀ, ಈಶ್ವರಗೆರೆ 66.2, ಬಾಬೂರು 30.8, ಸುಗೂರು 64.3, ಚಿತ್ರದುರ್ಗ 41.6, ಐನಹಳ್ಳಿ 25.2, ಭರಮಸಾಗರ 22, ತುರುವನೂರು 49.4, ಸಿರಿಗೆರೆ 10, ಹೊಸದುರ್ಗ 44.6, ಬಾಗೂರು 10.5, ಮತ್ತೋಡು 20.4, ಶ್ರೀರಾಂಪುರ 45, ಮಾಡದಕೆರೆ 34.2, ಹೊಳಲ್ಕೆರೆ 13.6, ಬಿ.ದುರ್ಗ 11, ತಾಳ್ಯ 12.4, ಎಚ್.ಡಿ.ಪುರ 21.4, ಚಳ್ಳಕೆರೆ 29.6, ನಾಯಕನಹಟ್ಟಿ 23.2, ತಳಕು 28.4, ಡಿ.ಮರಿಕುಂಟೆ 29.3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.