ಚಲಾವಣೆ ಆಗದ 10 ರೂ. ನಾಣ್ಯ

rbk coin
10 ರೂ.ಮುಖಬೆಲೆಯ ನಾಣ್ಯ,
Published on

ರಬಕವಿ/ಬನಹಟ್ಟಿ: ಗ್ರಾಮೀಣ ಭಾಗದಲ್ಲಿ ಸುಳ್ಳು ಸುದ್ದಿಯಿಂದಾಗಿ ದಿನ ನಿತ್ಯದ ವ್ಯವಹಾರಗಳಲ್ಲಿ ಐದು, ಹತ್ತು ರೂ. ಚಲಾವಣೆ ಆಗದೆ ಚಿಲ್ಲರೆ ಸಮಸ್ಯೆಯಾಗಿದೆ. ಈಗ ನಗರ ಪ್ರದೇಶಕ್ಕೂ ಈ ಸುದ್ದಿ ಹರಡಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು ಚಿಲ್ಲರೆ ಹಣಕ್ಕಾಗಿ ಪರದಾಡುವಂತಾಗಿದೆ.

ರಬಕವಿ- ಬನಹಟ್ಟಿ ಅವಳಿ ನಗರಗಳಲ್ಲಿ 5 ರೂ. ನೋಟು ಹಾಗೂ 10 ರೂ. ಮುಖಬೆಲೆ ನಾಣ್ಯ ನಕಲಿ ಎಂಬ ವದಂತಿ ಹಬ್ಬಿದ್ದರಿಂದ ಯಾರೂ ಅವುಗಳನ್ನು ಪಡೆಯುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಚಿಲ್ಲರೆಗಾಗಿ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೆಲವರು 5 ಹಾಗೂ 10 ರೂ. ಬದಲಾಗಿ ಬೇರೆ ವಸ್ತುಗಳನ್ನು ಉಪಯೋಗಿಸಿ ತಮ್ಮದೇ ಬ್ರಾೃಂಡ್ ಮಾಡಿಕೊಂಡಿದ್ದರೆ ಇನ್ನೂ ಕೆಲವರು ತಮ್ಮಲ್ಲಿರುವ ಸಾಮಗ್ರಿಗಳನ್ನು ಹೆಚ್ಚಿಗೆ ನೀಡಿ 50 ರೂ.ವರೆಗೆ ವ್ಯಾಪಾರ ಮಾಡುವಂತೆ ಪುಸಲಾಯಿಸುತ್ತಿದ್ದಾರೆ.

ಅಲ್ಲದೆ, ಕೆಲ ಸರ್ಕಾರಿ ಇಲಾಖೆಯಲ್ಲೂ ಅನಧಿಕೃತವಾಗಿ ಇದು ಜಾರಿಯಾಗಿದ್ದರಿಂದ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

5 ರೂ. ನೋಟು ಹಾಗೂ 10 ರೂ. ನಾಣ್ಯಗಳನ್ನು ಸರ್ಕಾರ ಬಂದ್ ಮಾಡಿಲ್ಲ. ಇಂತಹ ನೋಟು-ನಾಣ್ಯಗಳನ್ನು ಪಡೆದು ಉದ್ಯೋಗದಲ್ಲಿ ಸಹಕರಿಸಬೇಕು. ಇಲ್ಲದಿದ್ದರೆ ವ್ಯಾಪಾರ ಕುಂಠಿತಗೊಳ್ಳುತ್ತದೆ. ಇದಕ್ಕೆ ಅವಕಾಶ ನೀಡಬಾರದು.
ಬದ್ರಿನಾರಾಯಣ ಭಟ್ಟಡ, ಉಪಾಧ್ಯಕ್ಷ, ವ್ಯಾಪಾರಸ್ಥರ ಸಂಘ, ಬನಹಟ್ಟಿ.
..........................................
ನೋಟು, ನಾಣ್ಯಗಳು ಅಮಾನ್ಯಗೊಂಡಿಲ್ಲ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ವ್ಯಾಪಾರಸ್ಥರೂ ಎಲ್ಲ ನೋಟು ನಾಣ್ಯಗಳನ್ನು ಸ್ವೀಕರಿಸಬೇಕು.
ರಮೇಶ ಶಿಂಧೆ, ವ್ಯವಸ್ಥಾಪಕ, ಎಸ್‌ಬಿಐ ಬ್ಯಾಂಕ್, ಬನಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net