10 ತೊಲ ಬೆಳ್ಳಿ ಆಭರಣ ಕಳವು

crime
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯ ವಲಭಭಾಯ್ ನಗರದ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ದೇವರ ಮೂರ್ತಿಗೆ ಹಾಕಿದ್ದ ಬೆಳ್ಳಿ ಆಭರಣ ಕಳವಾದ ಘಟನೆ ನಡೆದಿದೆ.

ದೇವಸ್ಥಾನಕ್ಕೆ ಹಾಕಿದ್ದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ದೇವಿಯ ಕಣ್ಣು ಸೇರಿ 10ಕ್ಕೂ ಹೆಚ್ಚು ತೊಲ ಬೆಳ್ಳಿ ಆಭರಣ ಕಳವು ಮಾಡಿ ಪರಾರಿಯಾಗಿದ್ದಾರೆ. ಅಲ್ಲದೇ ಹುಂಡಿಯನ್ನೂ ಒಡೆದು ಕಳವು ಮಾಡಿದ್ದಾರೆ. ಶಹರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಂ. ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net