10 ಪೊಲೀಸರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Police
ಮುಖ್ಯ ಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಕ್ರಂ ಆಮ್ಟೆ
Published on

ಬೆಳಗಾವಿ: ನಗರದ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ವಿಕ್ರಂ ಆಮ್ಟೆ, ಬೆಳಗಾವಿ ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೊಡಿ ಸೇರಿ ಜಿಲ್ಲೆಯ 10 ಜನ ಪೊಲೀಸರಿಗೆ 2017-18ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪದಕ ವಿತರಣೆ ಮಾಡಿ, ಗೌರವಿಸಿದ್ದಾರೆ. ಕಂಗ್ರಾಳಿ ಪೊಲೀಸ್ ತರಬೇತಿ ಕೇಂದ್ರದ ವಿಶೇಷ ಆರ್‌ಎಸ್‌ಐ ಕೆ.ಎಂ. ಗಿರೀಶ್, ಖಾನಾಪುರ ಠಾಣೆಯ ಪಿಎಸ್‌ಐ ಪರಶುರಾಮ ಪೂಜೇರ, ನಿಪ್ಪಾಣಿ ಗ್ರಾಮೀಣ ಠಾಣೆ ಪೇದೆ ಶೇಖರ ಅಸೋಡೆ, ಹುಕ್ಕೇರಿ ಠಾಣೆ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಕೆಎಸ್‌ಆರ್‌ಪಿ 2ನೇ ಪಡೆಯ ವಿಶೇಷ ಎಆರ್‌ಎಸ್‌ಐ ವೈ.ಬಿ.ಕುಂದರಗಿ, ಐಗಳಿ ಠಾಣೆ ಪೇದೆ ಅಣ್ಣಾಸಾಹೇಬ್ ಇರಕಾರ ಹಾಗೂ ರಮೇಶ ಅಕ್ಕಿ, ಸಂಕೇಶ್ವರದ ಅಶೋಕ ಉಗಲಾಟ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಸೇವೆ ಆರಂಭಿಸಿದ 8 ವರ್ಷಗಳಲ್ಲಿಯೇ ವಿಕ್ರಂ ಆಮ್ಟೆ ಅವರಿಗೆ ಮುಖ್ಯಮಂತ್ರಿ ಪದಕ ಬಂದಿರುವುದು ಯುವ ಪೊಲೀಸ್ ವರ್ಗಕ್ಕೆ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದೆ. ವಿಕ್ರಂ ಆಮ್ಟೆ ಅವರು ಬಳ್ಳಾರಿ, ಚಾಮರಾಜನಗರ, ಮಂಗಳೂರು, ಮೈಸೂರಿನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಲೋಕಾಯುಕ್ತ ಎಸ್ಪಿಯಾಗಿರುವ ಯಶೋದಾ ವಂಟಗೊಡಿ ಅವರು ಬೆಳಗಾವಿಯ ಡಿಸಿಪಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net