ಮೂವರಿಗೆ ಪರಸ್ಪರ ಸಾಹಿತ್ಯ ವೇದಿಕೆ ಪ್ರಶಸ್ತಿ

nad'soza
Published on

ಸಾಗರ: ಪರಸ್ಪರ ಸಾಹಿತ್ಯ ವೇದಿಕೆಯಿಂದ ಈ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಮೂವರು ಸಾಧಕರಿಗೆ ಪ್ರಕಟಿಸಲಾಗಿದೆ.

ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಶಿವಮೊಗ್ಗದ ಮುನೀರ್, ಅಕ್ಕಮಹಾದೇವಿ ಪ್ರಶಸ್ತಿಗೆ ಡಾ. ಎಚ್.ಎಸ್.ಅನುಪಮಾ ಮತ್ತು ರೇವರೆಂಡ್ ಎಫ್. ಕಿಟೆಲ್ ಪ್ರಶಸ್ತಿಗೆ ಲೇಖಕ ವಿಲಿಯಂ ಅವರು ಭಾಜನರಾಗಿದ್ದಾರೆ ಎಂದು ವೇದಿಕೆ ಗೌರವಾಧ್ಯಕ್ಷ ಹಾಗೂ ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಜ.26ರಂದು ಬೆಳಗ್ಗೆ 11ಕ್ಕೆ ಸಾಗರದ ಬ್ರಾಸಂ ಸಭಾಭವನದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಸನ್ಮಾನ ಪತ್ರ ಒಳಗೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆ ಅಧ್ಯಕ್ಷ ಡಾ. ಸಫ್ರಾರ್ಜ್ ಚಂದ್ರಗುತ್ತಿ ಮಾತನಾಡಿ, ಪರಸ್ಪರ ಸಾಹಿತ್ಯ ವೇದಿಕೆ ಸತತ 17 ವರ್ಷಗಳಿಂದ ಅರ್ಥಪೂರ್ಣ ಉಪನ್ಯಾಸ, ಸಂವಾದ, ವಿಚಾರಗೋಷ್ಠಿ ನಡೆಸಿಕೊಂಡು ಬರುತ್ತಿದೆ. ಕನ್ನಡ ಭಾಷಾ ಪತ್ರಿಕೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತ ಬಂದಿದೆ. ಕಳೆದ ವರ್ಷದಿಂದ ವಿಶೇಷ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ ಎಂದರು.

ಡಾ. ಜಿ.ಎಸ್.ಭಟ್, ಎಸ್.ಎಂ.ಗಣಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net