2026ಕ್ಕೆ 10 ಸಾವಿರ ಕೋಟಿ ರೂ. ವಹಿವಾಟು

mysore-mysuru
Published on

ಮೈಸೂರು: ಪ್ರಸ್ತುತ ಮೈಸೂರು ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ರಫ್ತಿನಿಂದ ವಾರ್ಷಿಕ 5 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, 2026ಕ್ಕೆ 10 ಸಾವಿರ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ತಿಳಿಸಿದರು.


ಬೆಂಗಳೂರು ಬಳಿಕ ಮೈಸೂರಿನಲ್ಲಿ ಡಿಜಿಟಲ್ ಉದ್ಯಮಕ್ಕೆ ಪೂರಕ ವಾತಾವರಣ ಇದೆ. ಮೈಸೂರಿನಲ್ಲಿ 18 ಸಾವಿರ ಐಟಿ ಇಂಜಿನಿಯರ್‌ಗಳು ಇದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಉದ್ದೇಶಿತ ಸೆಮಿ ಕಂಡಕ್ಟರ್ ಎರಡು ಹಂತಗಳಲ್ಲಿ ಜಾರಿಯಾಗುತ್ತದೆ. ರಾಜ್ಯ ಸರ್ಕಾರ ಜಾಗ, ವಿದ್ಯುತ್, ಪರ್ಮಿಷನ್ ನೀಡಿದೆ. ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲಿದ್ದು, ಒಪ್ಪಿಗೆ ದೊರೆತ ತಕ್ಷಣ ಉದ್ದಿಮೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.


ಸೆಮಿ ಕಂಡಕ್ಟರ್ ಆರಂಭಗೊಂಡರೆ 4 ರಿಂದ 6 ಸಾವಿರ ಜನರಿಗೆ ನೇರ ಉದ್ಯೋಗ, ಹತ್ತರಷ್ಟು ಪರೋಕ್ಷ ಹುದ್ದೆಗಳು ದೊರೆಯಲಿವೆ. ಪ್ರಾಕೃತಿಕ ಸಂಪತ್ತಿನ ಅವಲಂಬನೆ ಇಲ್ಲದೇ ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ಮೈಸೂರು ಐಟಿ ಕ್ಲಸ್ಟರ್ ಹೆಡ್ ಸುಧೀರ್ ತಿಳಿಸಿದರು.
ಸೆಮಿಕಂಡಕ್ಟರ್ ಪ್ರಾರಂಭವಾದರೆ ಮೈಸೂರಿನ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಹೊರ ಹೋಗಬೇಕಿಲ್ಲ. ಆದರೆ, ಉದ್ಯೋಗ ಪಡೆಯಲು ಬೇಕಾದ ಕೌಶಲ ಪಡೆದಿರಬೇಕು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net