10ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

SRS CHESS
Published on

ಶಿರಸಿ: ನಗರದಲ್ಲಿ ಎರಡು ದಿನ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ಚೆಸ್ ಪಂದ್ಯಾವಳಿಯಲ್ಲಿ 10 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಧನುಷ್ರಾಮ್ ಎಂ., ಉಡುಪಿಯ ನಿಖಿಲ್ ವಿಕ್ರಂ ಕೆ., ಬೆಂಗಳೂರಿನ ತೇಜಸ್ ಕೆ., ಉಪ್ಪಿನಂಗಡಿಯ ಪ್ರಣವ ಪಿ.ಜಿ., ಮಂಗಳೂರಿನ ಅನ್ಸಿಲ್ ಪಿಂಟೋ ವಿದ್ಯಾರ್ಥಿಗಳ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಅದರಂತೆ ವಿದ್ಯಾರ್ಥಿನಿಯರ ವಿಭಾಗದಲ್ಲಿ ನಂಜನಗೂಡಿನ ಅನಘ ಕೆ.ಜಿ., ಮೈಸೂರಿನ ಶರಧಿ ಶಾಸ್ತ್ರಿ, ನಂಜನಗೂಡಿನ ಲಿಖಿತಾ ಎ., ಕಾರ್ಕಳದ ಶಾನ್ವಿ ಎ. ಬಲ್ಲಾಳ, ಹುಬ್ಬಳ್ಳಿಯ ಫರ‌್ಹಾತ್ ಎಸ್. ಆಯ್ಕೆಯಾದರು.

ವಿದ್ಯಾರ್ಥಿಗಳಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ. ಭಾಗ್ವತ್ ಇತರರು ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net