43 ಪಿಯು ಕಾಲೇಜಿಗೆ 10 ಜನ ಪ್ರಾಂಶುಪಾಲರು! *ಶಿಕ್ಷಣಕ್ಕಾಗಿ ಬಡ ವಿದ್ಯಾರ್ಥಿಗಳ ಪರದಾಟ * ಶ್ರೀಮಂತ ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಅಭ್ಯಾಸ

raichur
raichur
Published on

ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿದ ಜಿಲ್ಲೆಯಲ್ಲಿ ಕೇವಲ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಲ್ಲಿ ಮಾತ್ರ ಪ್ರಾಂಶುಪಾಲರು ಹಾಗೂ ಬೋಧಕರ ಹುದ್ದೆಗಳ ಸಮಸ್ಯೆಯಾಗಿತ್ತು. ಆದರೆ ಇತ್ತಿಚ್ಚಿನ ದಿನಗಳಲ್ಲಿ ಈ ಸಮಸ್ಯೆ ಪದವಿ ಪೂರ್ವ ಶಿಕ್ಷಣದಲ್ಲೂ ಮುಂದುವರಿದು ಶೈಕ್ಷಣಿಕ ಪ್ರಗತಿಗೆ ಕೊಕ್ಕೆಹಾಕಿದಂತಾಗಿದೆ.

ಜಿಲ್ಲೆಯಲ್ಲಿನ 43 ಸರ್ಕಾರಿ ಕಾಲೇಜುಗಳು ಹಾಗೂ 5 ಆದರ್ಶ ಕಾಲೇಜುಗಳು ಸೇರಿ ಒಟ್ಟು 48 ಕಾಲೇಜುಗಳಾಗಿದ್ದು,ಇದರಲ್ಲಿ ಅನುದಾನಿತ ಪಿಯು ಕಾಲೇಜು 8, ಖಾಸಗಿ ಕಾಲೇಜು 151 ಕಾಲೇಜುಗಳು ಸೇರಿ ಒಟ್ಟು 207 ಕಾಲೇಜುಗಳಿವೆ. ಆದರೆ ಈ ಕಾಲೇಜುಗಳ ಪೈಕಿ ಸರ್ಕಾರಿ ಕಾಲೇಜಿನಲ್ಲಿ ಕೇವಲ 10 ಜನ ಮಾತ್ರ ಪ್ರಾಂಶುಪಾಲರಿದ್ದು, ಉಳಿದ ಕಾಲೇಜಿನಲ್ಲಿ ಪ್ರಭಾರಿ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಎಷ್ಟು ಜನ ಪ್ರಾಂಶುಪಾಲರು

ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರ ವಿವಿಧ ವಿಷಯಗಳ ಉಪನ್ಯಾಸಕರ ಭರ್ತಿ ಮಾಡಿ ಕೊಂಡಿತ್ತು. ಆಗ ರಾಯಚೂರು ಜಿಲ್ಲೆಗೆ 10 ಜನ ಖಾಯಂ ಉಪನ್ಯಾಸಕರು ಲಭ್ಯವಾಗಿದ್ದರು. ಆಗ ಪ್ರಾಂಶುಪಾಲರ ಬಡ್ತಿಯಾಗಿದ್ದರಿಂದ ಅಂದು 4 ಜನ ಮಾತ್ರ ಲಭ್ಯರಾಗಿದ್ದರು. ಈಗ 43 ಪ್ರಾಂಶುಪಾಲರ ಪೈಕಿ ಕಳೆದ ವರ್ಷ ಆರು ಜನ ಈಗ ಹೊಸದಾಗಿ 4 ಜನ ಪ್ರಾಂಶುಪಾಲರು ವರ್ಗಾವಣೆಯಾಗಿ ಬಂದು ವರದಿ ಮಾಡಿಕೊಂಡಿರುವುದರಿಂದ ಪ್ರಾಂಶುಪಾಲರ ಸಂಖ್ಯೆ ಹತ್ತಕ್ಕೇರಿದೆ.

ಅದರಂತೆ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವುದರಿಂದ ಗುಣಮಟ್ಟದ ಬೋಧನೆ, ಮಕ್ಕಳ ಕಲಿಕೆಯದ್ದೆ ಚಿಂತೆಯಾಗಿದೆ. ಜಿಲ್ಲೆಗೆ ಮಂಜೂರಾಗಿರುವ 46 ಪ್ರಾಂಶುಪಾಲರ ಹುದ್ದೆ ಪೈಕಿ 33 ಪ್ರಾಂಶುಪಾಲರ ಹುದ್ದೆ ಖಾಲಿ ಇದ್ದರೆ, ವಿವಿಧ ವಿಷಯಗಳ 416 ಉಪನ್ಯಾಸಕರ ಪೈಕಿ 130 ಹುದ್ದೆ ಖಾಲಿ ಇವೆ. 41 ಗ್ರೂಪ್ ಸಿ ಹುದ್ದೆಗಳ ಮಂಜೂರಾಗಿದ್ದು, ಈ ಪೈಕಿ 22 ಖಾಲಿ ಇದ್ದು, 37 ಡಿ ಗ್ರೂಪ್ ಹುದ್ದೆಗಳ ಪೈಕಿ 28 ಹುದ್ದೆ ಖಾಲಿ ಇವೆ.

ವಿದ್ಯಾರ್ಥಿಗಳ ಪರದಾಟ

ಜಿಲ್ಲೆಯ ಪಿಯು ಫಲಿತಾಂಶ ಹೆಚ್ಚಳ ಮಾಡಬೇಕೆಂಬ ಆಸಕ್ತಿ, ಪರಿಶ್ರಮ ಪಟ್ಟರೂ ಇರುವ ಹುದ್ದೆಗಳಿಗೆ ಅರ್ಧಕ್ಕೂ ಅಧಿಕ ಹುದ್ದೆ ಖಾಲಿ ಇರುವುದರಿಂದ ಯಾವ ವಿಷಯ, ಯಾರು ಹೇಳಬೇಕೆಂಬುದೆ ಉಪನ್ಯಾಸಕರನ್ನು ಕಾಡುತ್ತಿದೆ.

ಆಂಗ್ಲ ವಾಣಿಜ್ಯ ಮತ್ತು ವಿಜ್ಞಾನದ ವಿವಿಧ ವಿಷಯಗಳ ಕಲಿಯಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹೀಗಾಗಿ, ಅನಿವಾರ್ಯವಾಗಿ ಪಾಲಕರು ಪ್ರತಿಷ್ಠಿತ ಖಾಸಗಿ ಕಾಲೇಜುಗಳತ್ತ ಮುಖ ಮಾಡುತ್ತಿರುವುದರಿಂದಲೇ ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾಗುವ ಶೇ.30ರಷ್ಟು ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳತ್ತ ಮುಖ ಮಾಡುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಈಗ ಖಾಲಿ ಇರುವ ವಿವಿಧ ವಿಷಯಗಳ ಬೋಧನೆಗೆ ಸುಮಾರು ಅತಿಥಿ ಉಪನ್ಯಾಸಕರ ನೇಮಿಸಿಕೊಳ್ಳಲು ಆದೇಶಿಸಿದೆ.

ಈಗಿರುವ ಖಾಯಂ ಉಪನ್ಯಾಸಕರಿಗೆ ಇರುವ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಬೋಧನೆ ಸಮಯ ವಿಭಜಿಸಿ ಪಕ್ಕದ ಕಾಲೇಜುಗಳಿಗೂ 10 ತಾಸು ಸಮಯ ಮೀರದಂತೆ ಮಾಡಿ ಅಲ್ಲಿಗೆ ನಿಯೋಜಿಸಿರುವುದು ಭಾರ ಎನ್ನಿಸ ತೊಡಗಿದೆ. ಅಲ್ಲದೆ, ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರಿಲ್ಲದ ಕಾರಣದಿಂದ ಇರುವ ಖಾಯಂ ಉಪನ್ಯಾಸಕರ ಪೈಕಿ ಹಿರಿಯರಿಗೆ ಪ್ರಾಂಶುಪಾಲರ ಪ್ರಭಾರ ವಹಿಸಿದ್ದು ಭಾರವಾಗಿ ದ್ದರಿಂದ ಅತ್ತ ವಿದ್ಯಾರ್ಥಿಗಳಿಗೆ, ಇತ್ತ ಆಡಳಿತಾತ್ಮಕವಾಗಿ ಯೂ ಕೆಲಸ ನಿರ್ವಹಣೆ ಸಮಸ್ಯೆಯಾಗಿ ಪರಿಣಮಿಸಿದೆ.

ಬುದ್ದಿವಂತ ವಿದ್ಯಾರ್ಥಿ ಹೊರ ಜಿಲ್ಲೆಯಲ್ಲಿ ಅಭ್ಯಾಸ

ಹಿಂದುಳಿದ ಜಿಲ್ಲೆಯೆಂದು ಹಣೆ ಪಟ್ಟಿ ಹೊಂದಿದ ಜಿಲ್ಲೆಯಲ್ಲಿ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಭಾವನೆಯಿಂದ ಬೆಂಗಳೂರು, ಧಾರವಾಡ,ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿದ್ಯಾಭ್ಯಾಸ ಮಾಡಲು ತೆರಳುತ್ತಿದ್ದು ಇಲ್ಲಿ ಉಳಿದ ಬಡವರ ಮಕ್ಕಳು ಮಾತ್ರ ಓದುವ ಪರಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಪ್ರಾಂಶುಪಾಲರ ಸಂಖ್ಯೆ ಕಡಿಮೆ ಇದೆ. ಆದರಂತೆ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಅತಿಥಿ ಉಪನ್ಯಾಸಕರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೊಟ್ಟುರು ಬಸಪ್ಪ ಉಪ ನಿರ್ದೇಶಕ ಡಿಡಿಪಿಯು ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net