ಪಶ್ಚಿಮ ವಿಭಾಗದಲ್ಲಿ ಹತ್ತು ಠಾಣೆಗಳು ಸೀಲ್​ಡೌನ್

police
Published on

ಬೆಂಗಳೂರು: ಜೂ.29ರಂದು ನಡೆದಿದ್ದ ಸುಬ್ರಮಣಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ 9 ಆರೋಪಿಗಳ ಪೈಕಿ ಮೂವರಿಗೆ ಕರೊನಾ ಸೋಂಕು ದೃಢವಾಗಿದೆ. ಆರೋಪಿಗಳನ್ನು ಬಂಧಿಸಿದ್ದ ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ.

ಆರೋಪಿಗಳ ಸಂಪರ್ಕದಲ್ಲಿದ್ದ ಪೊಲೀಸರನ್ನು ಹೋಂ ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ ಕಲಾಸಿಪಾಳ್ಯ, ಚಾಮರಾಜಪೇಟೆ, ಜೆ.ಜೆ.ನಗರ, ಕಾಮಾಕ್ಷಿಪಾಳ್ಯ, ಕೆ.ಪಿ. ಅಗ್ರಹಾರ, ಕೆಂಗೇರಿ, ಅನ್ನ ಪೂರ್ಣೆಶ್ವರಿನಗರ ಠಾಣೆಗಳನ್ನು ಮುಚ್ಚಲಾಗಿದೆ.

ಮಧ್ಯಾಹ್ನ ಸೀಲ್​ಡೌನ್, ರಾತ್ರಿ ಕರ್ತವ್ಯ: ಸೋಂಕು ದೃಢವಾದ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆಯನ್ನು ಗುರುವಾರ ಮಧ್ಯಾಹ್ನ ಸೀಲ್​ಡೌನ್ ಮಾಡಲಾಗಿತ್ತು. ಆದರೆ, ದ್ವಿತೀಯ ಸಂಪರ್ಕವಿದ್ದ ಪೊಲೀಸರನ್ನು ಠಾಣೆಗೆ ಬಂದು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಭಯದಲ್ಲಿಯೇ ರಾತ್ರಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net