ಭೀಕರ ಅಪಘಾತಕ್ಕೆ 10 ಜನರ ದುರ್ಮರಣ

1685368062407
Published on

ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರಾಪೋಲ್ ಬಳಿ ತಿ.ನರಸೀಪುರ ಮತ್ತು ಕೊಳ್ಳೇಗಾಲದ ಮುಖ್ಯ ರಸ್ತೆಯಲ್ಲಿ ಸೋಮವಾರ ಭೀಕರ ಅಪಘಾತ ಸಂಭವಿಸಿ 10 ಜನರು ಮೃತಪಟ್ಟಿದ್ದಾರೆ. ಖಾಸಗಿ ಬಸ್ ಮತ್ತು ಇನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ 3 ವರ್ಷದ ಹೆಣ್ಣು ಮಗು, 7 ವರ್ಷದ ಗಂಡು ಮಗು ಮತ್ತು ಚಾಲಕ ಸೇರಿದಂತೆ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಧ್ಯಾಹ್ನ 2.30ರ ಸುಮಾರಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ತಿ.ನರಸೀಪುರದಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಕೊಳ್ಳೇಗಾಲದಿಂದ ತಿ.ನರಸೀಪುರ ಮಾರ್ಗವಾಗಿ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣವಾಗಿದ್ದು, ಬಸ್ಸಿನ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಕಾರಿನಲ್ಲಿದ್ದ 3 ವರ್ಷದ ಹೆಣ್ಣು ಮಗು, 7 ವರ್ಷದ ಗಂಡು ಮಗು ಸೇರಿದಂತೆ 4 ಮಕ್ಕಳು, 30, 35 ವರ್ಷದ ಆಸುಪಾಸಿನ ಮೂವರು ಮಹಿಳೆಯರು, ಚಾಲಕ ಸೇರಿದಂತೆ 13 ಜನರು ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಮೂರು ಮಕ್ಕಳು, ಮೂವರು ಮಹಿಳೆಯರು, 4 ಪುರುಷರು ಸೇರಿದಂತೆ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 5 ವರ್ಷದ ಮಗು ಸೇರಿದಂತೆ 24 ವರ್ಷದ ಯುವಕ, 45 ವರ್ಷದ ಪುರುಷನ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net