

ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಕಮಡೊಳ್ಳಿ ಗ್ರಾಮದ ನಳದ ಬಾವಿ ಹತ್ತಿರ ಗ್ರಾಮದಿಂದ ದೇವನೂರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ಡಾಂಬರ್ ರಸ್ತೆ ಬದಿಯಲ್ಲಿ ಕಮಡೊಳ್ಳಿ ಗ್ರಾಮದ ಏಳು ಜನ, ಶಿರೂರ ಗ್ರಾಮದ ಇಬ್ಬರು ಹಾಗೂ ಕುಂದಗೋಳದ ಒಬ್ಬ ಸೇರಿ 10 ಜನರು ಇಸ್ಟೀಟ್ ಆಡುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.
ಪೋಲಿಸರು ಇಸ್ಪೀಟ್ ಎಲೆಗಳು ಹಾಗೂ 10,080 ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.