

ಗುಳೇದಗುಡ್ಡ: ಪಟ್ಟಣದ ಸಿ.ಎಸ್.ಐ ವೈಗ್ಲೆ ಸ್ಮಾರಕ ದೇವಾಲಯದ 175ನೇ ವರ್ಷದ ನಿಮಿತ್ತ ಅ.10 ರಂದು ಬೆಳಗ್ಗೆ 10 ಗಂಟೆಗೆ ಕ್ರೈಸ್ತ್ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್ ಸಭಾಪಾಲಕ ರೆ. ಸುರೇಶ ನಾಯ್ಕರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಸೆಲ್ ಮಿಷನರಿಯ ರೆ. ಕೀಸ್ಟ್ ಅವರು 1849ರಲ್ಲಿ ಪಟ್ಟಣದಲ್ಲಿ ಚರ್ಚ್ ನಿರ್ಮಾಣಕ್ಕೆ ಕಾರಣೀಕರ್ತರಾದರು. ಅಲ್ಲದೆ, 1858ರಲ್ಲಿ ಮಕ್ಕಳಿಗೆ ಶಾಲೆ, ಅನಾಥ ಮಕ್ಕಳಿಗೆ ಹಾಸ್ಟೆಲ್ ಹಾಗೂ ‘ಕೃಪಾಲಯ’ ಆಸ್ಪತ್ರೆ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಐದು ಜೊತೆ ಕ್ರೈಸ್ತ್ ಜೋಡಿಗಳ ವಿವಾಹ ನಡೆಯಲಿದೆ ಎಂದರು.
ಬಿಶಪ್ ಕೆ.ಎನ್.ಡಿ. ಸಿಎಸ್‌ಐ ರೆ. ಡಾ. ಮಾರ್ಟಿನ್ ಬೋರ್ಗಾಯಿ, ನಿಕಟಪೂರ್ವ ಬಿಶಪ್ ರೆ. ರವಿಕುಮಾರ ನಿರಂಜನ್ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಉತ್ತರ ಕರ್ನಾಟಕ ಪ್ರಾದೇಶಿಕ ಪರಿಷತ್ ಅಧ್ಯಕ್ಷ ರೆ. ಸುರೇಶ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಅನೋನ್ಯ ಕೂಟದ ಅಧ್ಯಕ್ಷೆ ಪ್ರೇಮಾ ಬೋರ್ಗಾಯಿ, ಕೆಎಎನ್‌ಡಿ ಉಪಾಧ್ಯಕ್ಷ ರೆ. ರವಿ ಜೋಸ್ೆ, ಗೌರವ ಕಾರ್ಯದರ್ಶಿ ವಿಜಯಕುಮಾರ ದಂಡಿನ, ಗೌರವ ಖಜಾಂಚಿ ರೆ. ಸತ್ಯಬಾಬು ಸಮುವೇಲ, ವಿಜಯ ಅಮೃತರಾಜನ್, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ದಾವಣಗೆರೆಯ ಸಭಾಪಾಲಕ ರೆ. ಅನೀಲಕುಮಾರ ನೀಲುಗಲ್, ಹೊಸದುರ್ಗದ ಸಭಾಪಾಲಕ ರೆ. ಅಬ್ರಾಹಂ ಗುಂಡಿ ಮತ್ತಿತರರು ಉಪಸ್ಥಿತರಿರುವರೆಂದು ತಿಳಿಸಿದರು.
ಕಿರಣ ನಿಲೂಗಲ್, ಪ್ರವೀಣ ಕರಡಿಗುಡ್ಡ, ವಿಲಾಸ ಜೋಗುಳ, ವಿವೇಕ ಕರಡಿಗುಡ್ಡ, ಎಸ್ತಾ ಗುಂಡಿ, ನಿರ್ಮಾಲಾ ಕರಡಿಗುಡ್ಡ, ರೇಣುಕಾ ಗೌಡರ ಸುದ್ದಿಗೋಷ್ಠಿಯಲ್ಲಿದ್ದರು.