

ಸೋಮವಾರಪೇಟೆ: ಬಸವನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ 10 ಲೀಟರ್ ಕಳ್ಳಬಟ್ಟಿ ಹಾಗೂ 35 ಲೀಟರ್ ಪುಳಿಗಂಜಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಬಸವನಹಳ್ಳಿ ಗ್ರಾಮದ ಉನ್ನಿಕೃಷ್ಣನ್ ಅವರ ಮನೆ ಮತ್ತು ಕಾಫಿ ತೋಟದಲ್ಲಿ ಹುಡುಕಿದಾಗ ಕಳ್ಳಬಟ್ಟಿ ಹಾಗೂ ತಯಾರಿಸುವ ಸಲಕರಣೆಗಳು ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಕಚೇರಿ ಅಬಕಾರಿ ನಿರೀಕ್ಷಕ ಬಿ.ಎಸ್. ಲೋಕೇಶ್, ಸಿಬ್ಬಂದಿ ಎಸ್.ಮಹಾಂತೇಶ್, ಮಧು ಭಾಗವಹಿಸಿದ್ದರು.