

ಬೆಳಗಾವಿ: ಇಲ್ಲಿನ ಸಮರ್ಥ ನಗರದಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆ ಪೊಲೀಸರು ಶನಿವಾರ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡು ಮನೆಗಳ್ಳನನ್ನು ಬಂಧಿಸಿದ್ದಾರೆ.
ಜಿಲ್ಲೆಯ ನಿಪ್ಪಾಣಿಯ ಯಾಸೀನ್ ಹಾಸೀಂ ಶೇಖ್ (23) ಬಂಧಿತ ವ್ಯಕ್ತಿ. ಆ.20ರಂದು ಸಮರ್ಥ ನಗರದಲ್ಲಿ ಕಳ್ಳರು ಮನೆ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಿರುವ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸಿಪಿ ಎನ್.ವಿ.ಭರಮನಿ ನೇತೃತ್ವದಲ್ಲಿ ಪಿಐ ಮಹಾಂತೇಶ ದಾಮನ್ನವರ ತಂಡ ತನಿಖೆ ನಡೆಸಿ ಮನೆಗಳ್ಳನನ್ನು ದಸ್ತಗಿರಿ ಮಾಡಿ 10 ಲಕ್ಷ ರೂ. ಮೌಲ್ಯದ 231 ಗ್ರಾಂ ಬಂಗಾರ ಮತ್ತು 140 ಗ್ರಾಂ ಬೆಳ್ಳಿ ಆಭರಣಗಳನ್ನು ವಡಿಸಿಕೊಂಡಿದೆ.
ಪಿಎಸ್‌ಐ ವಿಠ್ಠಲ ಹಾವನ್ನವರ, ಮಹಾಂತೇಶ ಮಠಪತಿ, ಶರತಕುಮಾರ ಖಾನಾಪೂರೆ, ವಿಶ್ವನಾಥ ಮಾಳಗಿ, ಶಂಕರ ಕುಗಟೊಳ್ಳಿ, ಖಾದರಸಾಬ್ ಖಾನಮ್ಮನವರ್, ಲಕ್ಷ್ಮಣ ಕಡೋಲ್ಕರ, ಆಶೀರ್ ಜಮಾದಾರ್, ಶಿವಾನಂದ ಚಂಡಕಿ, ವಿನೋದ ಜಗದಾಳೆ, ಶಿವಪ್ಪ ತೇಲಿ, ಸಂಜು ಪಾತ್ರೋಟ ಅವರಿಗೆ ಪೊಲೀಸ್ ಆಯುಕ್ತ ಎನ್.ಎಸ್.ಸಿದ್ದರಾಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ.