

ಮಹಾಲಿಂಗಪುರ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆ ಸಾಮಾನ್ಯ ಸಭೆ ನಡೆಯಿತು.
ಪುರಸಭೆ ವ್ಯವಸ್ಥಾಪಕ ಎಸ್. ಎನ್. ಪಾಟೀಲ ಮಾತನಾಡಿ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಆಸ್ತಿ ತೆರಿಗೆ, ಕಸ ಸಂಗ್ರಹ, ಶುಲ್ಕ, ನೀರಿನ ಕರ, ಅಂಗಡಿ ಬಾಡಿಗೆ, ಎಸ್.ಎ್.ಸಿ. ಅನುದಾನ ಸೇರಿ ತಲಾ ತಿಂಗಳುಗಳ ಒಟ್ಟು 30 ಕ್ರಮ ಸಂಖ್ಯೆ ಹೊಂದಿದ ಜಮೆ ವಿವರ ನೀಡಿ, ಖರ್ಚಿನ ಬಾಬತ್ತಿನಲ್ಲಿ ಸಿಬ್ಬಂದಿ ವೇತನ, ಎಸ್.ಎ್.ಸಿ ಬೀದಿ ದೀಪಗಳ ಹಾಗೂ ಬೋರ್‌ವೆಲ್‌ಗಳು ವಿದ್ಯುತ್ ಬಿಲ್, ಎಸ್. ಡಬ್ಲ್ಯೂ ಘಟಕದಲ್ಲಿ ಶೆಡ್ ನಿರ್ಮಾಣ, ಗಟಾರ್ ನಿರ್ಮಾಣ, ರಸ್ತೆ ದುರಸ್ತಿ, ಮನೆ ಮನೆ ಕಸ ಸಂಗ್ರಹ ಸಿಬ್ಬಂದಿ ವೇತನ ಸೇರಿ ಹಲವಾರು ಖರ್ಚಿನ ಬಾಬತ್ತನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.
80 ಲಕ್ಷಗಳ ರೂ. ಉಳಿಕೆ ಹಣದಲ್ಲಿ ಮೃತ ಯೋಧ ಮಹೇಶ ಮರೆಗೊಂಡ ಅಂತಿಮ ಸಂಸ್ಕಾರಕ್ಕೆ ನೀಡಿದ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ 10 ಲಕ್ಷ ರೂ. ನೀಡುವ ಮತ್ತು ಉಳಿದ 70 ಲಕ್ಷಗಳನ್ನು 23 ವಾರ್ಡ್‌ಗಳಿಗೆ ಹಂಚಿಕೆ ಕುರಿತ ಪ್ರಸ್ತಾವನೆಗೆ ಸಭೆ ಅನುಮೋದನೆ ನೀಡಿತು.
27 ಕೋಟಿ ರೂ. ವೆಚ್ಚದ 24*7 ಶುದ್ಧ ಕುಡಿಯುವ ನೀರಿನ ಯೋಜನೆ ಕುರಿತು ಚರ್ಚೆಯಲ್ಲಿ ಸರ್ವ ಸದಸ್ಯರು ತಕರಾರು ತೆಗೆದರು. ಈಗಾಗಲೇ ಎರಡು ಹಂತಗಳಲ್ಲಿ 10 ಕೋಟಿ ರೂ. ವೆಚ್ಚವಾಗಿದ್ದು ಅದು ನಿಷ್ಪ್ರಯೋಜಕವಾಗಿದೆ ಎಂದಾಗ ಇದಕ್ಕೆ ಉತ್ತರ ನೀಡಿದ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಘಟಪ್ರಭಾದಿಂದ ನಿರಂತರ ನೀರು ಪೂರೈಕೆ ಆಗದ್ದರಿಂದಾಗಿ ಯೋಜನೆಗೆ ಅಡಚಣೆಯಾಗಿದೆ. ಇದಕ್ಕೆ ಡಿಪಿಆರ್ ತಯಾರಿಸಿ ಮಹಿಷವಾಡಗಿಯಿಂದ ನೀರು ಪೂರೈಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಜಮ್ಮು ಕಾಶ್ಮೀರ್‌ದ ಪೂಂಚ್ ವಲಯದ ರಸ್ತೆ ಅಪಘಾತದಲ್ಲಿ ಮಡಿದ ಮಹೇಶ ಮರಿಗೊಂಡ ಹಾಗೂ ಚಿತ್ರ ನಟ ದಿ. ಸರಿಗಮ ವಿಜಿ ಸ್ಮರಣೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ಬಳಿಕ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ 50 ಲಕ್ಷ ರೂ. ನಗದು ಪಡೆದ ಯುವಕ ರಮ್ಜಾನ್ ಪೀರಜಾದೆ ಹಾಗೂ ಪುರಸಭೆಗೆ ಇತ್ತೀಚೆಗೆ ನಾಮನಿರ್ದೇಶನಗೊಂಡ ಬಸವರಾಜ ಕರೆಹೊನ್ನ, ಪಾಪಾ ನಾಲಬಂದ, ಅನಂತನಾಗ ಬಂಡಿ, ಲಕ್ಕಪ್ಪ ಭಜಂತ್ರಿಯವರನ್ನು ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್‌ರಜಾಕ್ ಭಾಗವಾನ ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ರವಿ ಜವಳಗಿ, ಮುಸ್ತಾಕ್ ಚಿಕ್ಕೋಡಿ, ಪ್ರಹ್ಲಾದ್ ಸಣ್ಣಕ್ಕಿ, ಬಲವಂತಗೌಡ ಪಾಟೀಲ, ಬಸವರಾಜ ಯರಗಟ್ಟಿ, ಬಸವರಾಜ ಚಮಕೇರಿ, ಬಸವರಾಜ ಹಿಟ್ಟಿನಮಠ, ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಸಜನಸಾಬ ಪೆಂಡಾರಿ, ಬಸಪ್ಪ ಬುರುಡ, ರಾಜು ಗೌಡಪ್ಪಗೋಳ, ಸವಿತಾ ಕೋಳಿಗುಡ್ಡ, ಸುಜಾತಾ ಮಾಂಗ, ಸರಸ್ವತಿ ರಾಮೋಜಿ ಹಾಗೂ ಸಿಬ್ಬಂದಿ ಇದ್ದರು.