

ಮೈಸೂರು : ನಗರದ ಯಾದವಗಿರಿಯ ಮನೆಯೊಂದರಲ್ಲಿ 10.80 ಲಕ್ಷ ರೂ. ಮೌಲ್ಯದ ಒಡವೆ ಕಳ್ಳತನವಾಗಿದೆ.
ಗಣೇಶ್‌ರಾಜ್ ಅವರು ಅನ್ಯ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಅವರ ಪತ್ನಿ ವಸ್ತುಗಳ ಖರೀದಿಗಾಗಿ ಮಾಲ್‌ಗೆ ತೆರಳಿದ್ದರು. ಇದೇ ಸಮಯವನ್ನು ನೋಡಿಕೊಂಡ ಕಳ್ಳರು, ಮನೆಯ ಬಾಗಿಲು ಮೀಟಿ ಒಳನುಗ್ಗಿದ್ದಾರೆ.
ಕೊಠಡಿಯಲ್ಲಿ ಬೀರುವಿನಲ್ಲಿದ್ದ ಚಿನ್ನದ ಸರ, ಉಂಗುರ ಸೇರಿದಂತೆ ವಿವಿಧ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಗೋಕುಲಂ ನಿವಾಸಿ ಲಕ್ಷ್ಮಣ್ ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಲಕ್ಷ್ಮಣ ಅವರು ಮನೆಯಲ್ಲಿ ಇದ್ದ ಸಮಯದಲ್ಲೇ ಮೂವರು ದುಷ್ಕರ್ಮಿಗಳು ಬಾಗಿಲನ್ನು ಮೀಟಿ ಒಳ ನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ಅವರು ಜೋರಾಗಿ ಶಬ್ದ ಮಾಡಿದ್ದರಿಂದಾಗಿ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.