

ಮಂಗಳೂರು: ನಗರದ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಫಲ್ಗುಣಿ ನದಿ ತೀರದ ಬಳಿ ಗಾಂಜಾ ಮಾರಾಟಕ್ಕೆ ಬಂದಿದ್ದ ಇಬ್ಬರು ಯುವಕರನ್ನು ಬಂಧಿಸಿ, ಅವರಿಂದ 10.125 ಕಿ.ಗ್ರಾಂ. ಗಾಂಜಾವನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮನಪಳ್ಳಿಯ ಸಾಹೀಲ್ (19) ಹಾಗೂ ಸೋಮೇಶ್ವರದ ಮನ್ಸೂರ್ (21) ಬಂಧಿತರು.
ವಶಪಡಿಸಿಕೊಂಡ ಗಾಂಜಾದ ಮೌಲ್ಯ 3 ಲಕ್ಷ ರೂ. ಆಗಿದೆ. ಕಾರ್ಯಾಚರಣೆಯಲ್ಲಿ ನಗರ ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾವೂರು ಇನ್‌ಸ್ಪೆಕ್ಟರ್ ಗುರುರಾಜ್, ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.