ವಿಜಯಪುರ : ೧೦ ಜನ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

jail
Published on

ವಿಜಯಪುರ: ಕಳೆದ ೧೧ ವರ್ಷಗಳ ಹಿಂದೆ ಹೊಲದಲ್ಲಿ ಗಿಡದ ಸಂಬಂಧ ಜಗಳವಾಡಿ ಜೈಲು ಸೇರಿದ್ದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ೧೦ ಜನ ಕೈದಿಗಳಿಗೆ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.

೭೫ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ತೋರಿದ ಹಿನ್ನೆಲೆ ಜೈಲು ಹಕ್ಕಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ.
ನಗರದ ಕೇಂದ್ರ ಕಾರಾಗೃಹದಿಂದ ಆ.೧೫ರಂದು ಬೆಳಗ್ಗೆ ೧೧.೩೦ಕ್ಕೆ ಕೈದಿಗಳು ಬಿಡುಗಡೆಯಾಗಲಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಅವರು ಬಿಡುಗಡೆಯಾಗುತ್ತಿದ್ದಾರೆ. ನಾಲ್ವರು ಒಂದೇ ಕುಟುಂಬದವರು. ಕಳೆದ ೧೧ ವರ್ಷಗಳ ಹಿಂದೆ ಹೊಲದಲ್ಲಿ ಗಿಡದ ಸಂಬಂಧ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದ ಹಿನ್ನೆಲೆ ಜೈಲು ಸೇರಿದ್ದರು.

ಅದೇ ರೀತಿ ಮುದ್ದೇಬಿಹಾಳ ತಾಲೂಕಿನ ಬಸರಕೋಡದ ಸಿದ್ದಪ್ಪ ಸಂಗಪ್ಪ ಮಾದಾರ ಹಾಗೂ ಕಾಡಪ್ಪ ಚಂದಪ್ಪ ಮಾದಾರ ಇಬ್ಬರು ಅಣ್ಣ ತಮ್ಮಂದಿರು. ಆಸ್ತಿಗಾಗಿ ಜಗಳದ ಹಿನ್ನೆಲೆ ಜೈಲುಪಾಲಾಗಿದ್ದರು. ಇನ್ನೂ ಅಪ್ಪುಹಿರೇಮಠ, ಮಾಯಪ್ಪ ವಾಡೇದ, ಉಮಾ ಚವ್ಹಾಣ ಹಾಗೂ ಮುತ್ತವ್ಚ ನಾಗವ್ವಗೋಳ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳ್ಳಲಿದ್ದಾರೆ ಎಂದು ಕೇಂದ್ರ ಕಾರಾಗೃಹದ ಜೈಲರ್ ಡಾ.ಐ.ಜೆ.ಮ್ಯಾಗೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net