

ಹೊಸೂರು: ತಮಿಳುನಾಡಿನ ಪೆರಂಡಪಲ್ಲಿ ಅರಣ್ಯ ಪ್ರದೇಶದ ಬಳಿ ಬೆಂಗಳೂರು-ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸರ್ಕಾರಿ ಬಸ್‌ಗೆ 8 ಕಾರು ಮತ್ತು 3 ಲಾರಿಗಳು ಡಿಕ್ಕಿಯಾಗಿ 10 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಕೃಷ್ಣಗಿರಿಗೆ ತೆರಳುತ್ತಿದ್ದ ಈ ವಾಹನಗಳು ಒಂದರ ಹಿಂದೆ ಒಂದರಂತೆ ಅಪಘಾತಕ್ಕೀಡಾಗಿವೆ. ಅಪಘಾತವಾದ ಎಲ್ಲ ವಾಹನಗಳೂ ಜಖಂಗೊಂಡಿವೆ.
ಒಂದೇ ಕಾರಿನಲ್ಲಿದ್ದ ಕೊಯಮತ್ತೂರಿನ ಆಯಿಲ್ ಮಿಲ್ ಸಿಇಒ ವೆಂಕಟೇಶ್(33), ಸ್ನೇಹಿತ ಅರವಿಂದ್ (30), ನೌಕರರಾದ ತಂಜಾವೂರಿನ ದುರೈ (24) ಮತ್ತು ಪಳನಿಯ ಕಾರ್ತಿಕ್ ರಾಜಾ (26) ಇವರ ಪುತ್ರ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಅದೇ ಕಾರಿನಲ್ಲಿದ್ದ ಕೃಷ್ಣಗಿರಿ ಮೂಲದ ವೇಲ್ವಿಜಿ (65) ಚಾಲಕ ರವಿ (55)ಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆೇ ದಾಖಲಿಸಲಾಗಿದೆ. ಹೊಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.