10 ಜನ ಗಾಂಜಾ ಪೆಡ್ಲರ್‌ಗಳ ಬಂಧನ

ganja
Published on

ಹುಬ್ಬಳ್ಳಿ: ಧಾರವಾಡದ ಲಕಮನಹಳ್ಳಿ ಹಾಗೂ ಹಳೇ ಹುಬ್ಬಳ್ಳಿಯ ಕೌದಿಮಠದ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ 10 ಜನ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಮೊಹಮ್ಮದ್ ಇಸಾಕ್, ಹನುಮಂತ ಹಾವೇರಿ, ಆಸೀಫ್ ಹುಡೇದ, ಮಂಜುನಾಥ ಡಮರಿಕೊಪ್ಪ, ಅನಿಲ ನೆಲವಡಿ ವಿರುದ್ಧ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ, ಕಸಬಾಪೇಟೆ ಠಾಣೆಯಲ್ಲಿ ಶ್ರೀಕಾಂತ ಅವರಂಗೆ, ಅಭಿಷೇಕ ದಾಸರ, ಈರಣ್ಣ ಹಿರೇಮಠ, ವಿಶಾಲ ನರಗುಂದ, ವಿಜಯ ಶೆಟ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಧಿತರಿಂದ 35,750 ರೂ. ಮೌಲ್ಯದ 1175 ಗ್ರಾಂ ಗಾಂಜಾ, 9 ಮೊಬೈಲ್ ಫೋನ್, 2 ಬೈಕ್, 1700 ರೂ. ನಗದು ಸೇರಿ ಒಟ್ಟು 68,450 ರೂ. ಮೌಲ್ಯದ ಸಾಮಗ್ರಿ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net