

ಮಡಿಕೇರಿ: ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಅಲಂಕಾರ ಸಮಿತಿ ವತಿಯಿಂದ ೧೦ ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ತಿಳಿಸಿದರು.
ದಸರಾ ಮಂಟಪ ಸಮಿತಿಯ ೯೨ನೇ ವರ್ಷದ ದಸರಾ ಆಚರಿಸುತ್ತಿದ್ದು, ಸೆ೨೬ರಿಂದ ಅ೫ರವರೆಗೆ ದೇವಿಗೆ ವಿವಿಧ ರೀತಿಯ ಅಲಂಕಾರ ಪೂಜೆ ನಡೆಯಲಿದೆ. ಅಲಂಕಾರ ಸೇವೆ ಹಾಗೂ ಪೂಜೆ ಮಾಡಲಿಚ್ಚಿಸುವ ಭಕ್ತಾದಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಶ್ರೀ ದಂಡಿನ ಮಾರಿಯಮ್ಮ ಕರಗ ವಿಶೇಷತೆಯಿಂದ ಕೂಡಿದ್ದು, ೯ ದಿನಗಳ ಕಾಲ ನಗರದ ಹಲವು ಬೀದಿಗಳಿಗೆ ಕರಗವು ಪ್ರದಕ್ಷಿಣೆ ಮಾಡಿ ಭಕ್ತರಿಗೆ ಆಶೀರ್ವಾದ ನೀಡಲಿದೆ. ವಿಜೃಂಭಣೆಯಿಂದ ದಸರಾ ಉತ್ಸವ ನಡೆಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಎಲ್.ಸತೀಶ್, ಗೌರವ ಸಲಹೆಗಾರರಾದ ಟಿ.ಎಚ್.ಉದಯಕುಮಾರ್, ಪಿ.ಜಿ.ಹರೀಶ್ ಹಾಜರಿದ್ದರು.