ಅನಧಿಕೃತ ಬಳಕೆ 10 ಸಿಲಿಂಡರ್​ಗಳ ವಶ

10 cylinders seized for unauthorized use
Published on

ವಿಜಯಪುರ : ಗೃಹ ಬಳಕೆಯ ಸಿಲಿಂಡರ್​ಗಳಿಂದ ಅನಧಿಕೃತವಾಗಿ ರಿಫಿಲಿಂಗ್​ ಮಾಡುತ್ತಿದ್ದ ಅಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ, 31,920 ರೂ. ಮೌಲ್ಯದ ಒಟ್ಟು 10 ಎಚ್​ಪಿ ಕಂಪನಿ ಸಿಲಿಂಡರ್​ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಇಬ್ರಾಹಿಂ ರೋಜಾ ಬಳಿ ಪತ್ರಾಸ್​ ಶೆಡ್​ನಲ್ಲಿ ಹಾಗೂ ಬಾಗಲಕೋಟೆ ಕ್ರಾಸ್​ನ ಪತ್ರಾಸ್​ ಶೆಡ್​ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್​ಪಿಜಿ ಸಿಲಿಂಡರ ಸಂಗ್ರಹಣೆ ಮಾಡಿ ರಿಫಿಲಿಂಗ್​ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಅಲ್ಲದೆ, ದಾಳೆ ವೇಳೆ ಸಿಲಿಂಡರ್​ಗಳು ಸೇರಿದಂತೆ ಒಂದು ತೂಕದ ಯಂತ್ರ ಹಾಗೂ ರಿಫಿಲಿಂಗ್​ ಯಂತ್ರ ವಶಪಡಿಸಿಕೊಂಡು ವಿವಿಧ ಕಾಯ್ದೆಯಡಿ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿಚೌಕ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.ದಾಳಿಯಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಪಿಎಸ್​ಐ ರಾಜು ಮಮದಾಪುರ ಮತ್ತಿತರರಿದ್ದರು.

ವಿಜಯಪುರದ ವಿವಿಧ ಭಾಗದಲ್ಲಿ ಸಿಲಿಂಡರ್​ ಅಕ್ರಮ ರಿಫಿಲಿಂಗ್​ ಅಡ್ಡೆಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ವಿಜಯಕುಮಾರ ಗುಮಶೆಟ್ಟಿ, ರಾಜು ಮಮದಾಪುರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net