10 ಮಂದಿ ಬಾಂಗ್ಲಾ ವಲಸಿಗರ ವಶ

14 SV PURA Bangla valasigaru
Published on

ಕೋಲಾರ; ಬಾಂಗ್ಲಾದೇಶದ ಮೂವರು ಮಕ್ಕಳು ಸೇರಿ 10 ಮಂದಿ ಅಕ್ರಮ ವಲಸಿಗರನ್ನು ಶ್ರೀನಿವಾಸಪುರ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಪಟ್ಟಣದ ರಾಮಕೃಷ್ಣ ಪಾಲಿ ಟೆಕ್ನಿಕ್​ ಕಾಲೇಜು ಸಮೀಪದ ಕೋಳಿ ಫಾಮ್​ರ್ನಲ್ಲಿ ಇಬ್ಬರು ಚಿಂದಿ ಆಯುತಿದ್ದುದ್ದನ್ನು ಕಂಡ ಪೊಲೀಸರು ಅವರ ಚಲನವಲನ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವುದು ಪತ್ತೆಯಾಗಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂದಗುಡಿ ಬಳಿ ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿ ಒಟ್ಟು 10 ಮಂದಿ ಇರುವುದು ಗೊತ್ತಾಗಿ ಅವರನ್ನೂ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಎಸ್ಪಿ ಬಿ.ನಿಖಿಲ್​ ಶ್ರೀನಿವಾಸಪುರ ಪೊಲೀಸ್​ ಠಾಣೆಗೆ ಭೇಟಿ ನೀಡಿ ಅಕ್ರಮ ವಲಸಿಗರಿಂದ ಹೆಚ್ಚಿನ ಮಾಹಿತಿ ಕಲೆಹಾಕಿದ್ದು, ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ. ಕೋಳಿ ಫಾಮ್​ರ್ಗಳಲ್ಲಿ ಕೆಲಸ ಹುಡುಕಿ ಜಿಲ್ಲೆಗೆ ವಲಸೆ ಬಂದಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net