ಕುರುಡುಮಲೆ ಹುಂಡಿಯಲ್ಲಿ 10.99 ಲಕ್ಷ ರೂಪಾಯಿ ಸಂಗ್ರಹ

Kurudumale Temple
Published on

ಮುಳಬಾಗಿಲು: ತಾಲೂಕಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ಶ್ರೀ ಗಣಪತಿ ದೇಗುಲ, ಶ್ರೀ ಕ್ಷವಾದಾಂಬ ಸಮೇತ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಒಟ್ಟು ₹ 10,99,030 ಸಂಗ್ರಹವಾಗಿದೆ. ವಿನಾಯಕ ದೇವಾಲಯದ ಹುಂಡಿಯಲ್ಲಿದ್ದ 25,000 ರೂ. ಒದ್ದೆಯಾಗಿದ್ದರಿಂದ ಎಣಿಕೆ ವೇಳೆ ಪ್ರತ್ಯೇಕ ವಾಡಿ ಒಣಗಿಸಿ ನಂತರ ಬ್ಯಾಂಕಿಗೆ ಜಮೆ ವಾಡಲಾಯಿತು. ಕಳೆದ ವಾರ್ಚ್‌ನಲ್ಲಿ ಹುಂಡಿ ಎಣಿಕೆ ವಾಡಿದ್ದು, ಏಪ್ರಿಲ್‌ನಿಂದ ಜುಲೈ 31ರವರೆಗೆ ಸಂಗ್ರಹವಾದ ಮೊತ್ತ ಇದಾಗಿದ್ದು, ಇನ್ನೂ ಆನ್‌ಲೈನ್ ಮತ್ತು ಇ-ಹುಂಡಿಯಲ್ಲಿ ಎಷ್ಟು ಜಮೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಒಂದು ತಿಂಗಳ ಹಿಂದೆ ದೇವಾಲಯ ಸ್ವಚ್ಛತೆ ಕಾರ್ಯ ವಾಡುವಾಗ ಆ್ಯಸಿಡ್ ಮಿಶ್ರಿತ ನೀರನ್ನು ಯಂತ್ರದ ಮೂಲಕ ಸಿಂಪಡಣೆ ಮಾಡಿದಾಗ ಹುಂಡಿಯ ಮೇಲ್ಭಾಗ ವಾತ್ರ ಮುಚ್ಚಿದ್ದು ತಳಭಾಗದ ಡೋರ್‌ಗಳ ಮೂಲಕ ನೀರು ಒಳಸೇರಿರುವುದರಿಂದ ನೋಟಗಳು ಒದ್ದೆಯಾಗಿವೆ ಎನ್ನಲಾಗಿದೆ.

ಗಣಪತಿ ದೇಗುಲದ ಹುಂಡಿಯಲ್ಲಿದ್ದ ₹ 25000 ಹಣ ವಾತ್ರ ಒದ್ದೆಯಾಗಿದ್ದು, ಅದನ್ನು ಒಣಗಿಸಿ ಬ್ಯಾಂಕಿಗೆ ಜವಾ ವಾಡಲಾಗಿದೆ. ದೇವಾಲಯ ಸ್ವಚ್ಛ ವಾಡುವಾಗ ಯಂತ್ರದಿಂದ ಫೋರ್ಸ್‌ನಲ್ಲಿ ನೀರು ಹೋಗಿ ಸ್ವಲ್ಪಮಟ್ಟಿಗೆ ಒದ್ದೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು.- ಕೆ.ವಿ.ಸುಬ್ರಮಣಿಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net