

ಕಲಬುರಗಿ: ನಂದೂರ ಕೈಗಾರಿಕಾ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಕಾಟನ್ ಜೆನ್ನಿಂಗ್ ಮತ್ತು ಪ್ರೆಸ್ಸಿಂಗ್ ಇಂಡಸ್ಟಿçಯಲ್ಲಿ ೯.೪೩ ಲಕ್ಷ ರೂ. ಮೌಲ್ಯದ ೧೦.೨೫ ಟನ್ ಕಾಟನ್ ಆಯಿಲ್ ಮಾಲೀಕರ ಗಮನಕ್ಕೆ ತಾರದೆ ಮ್ಯಾನೇಜರ್ ಅಜಯಕುಮಾರ ಯಾದವ್ ಮಾರಿಕೊಂಡಿದ್ದಾನೆ. ಕಳೆದ ಮಾ.೧ರಂದು ಇಂಡಸ್ಟಿçಯನ್ನು ಲೀಜ್ ಪಡೆದಿದ್ದು, ಬಿಹಾರದ ಅಜಯಕುಮಾರ ಯಾದವ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮಾರ್ಚ್ನಿಂದ ಇದುವರೆಗೆ ಇಂಡಸ್ಟಿçಯಲ್ಲಿ ೨೭.೩೬ ಕಾಟನ್ ಆಯಿಲ್ ಉತ್ಪಾದಿಸಿದ್ದು, ೧೫.೬೧ ಟನ್ ಮಾರಲಾಗಿದೆ. ಸ್ಟಾಕ್ ೧೧.೭೫ ಟನ್ ಇರಬೇಕಿತ್ತು. ಆದರೆ ಕೇವಲ ೧.೫೦ ಟನ್ ಇದೆ. ಗಿರಾಕಿಗಳಿಗೆ ಮೋಸದಿಂದ ಯಾದವ್ ಮಾರಾಟ ಮಾಡಿದ್ದಾನೆ ಎಂದು ಇಂಡಸ್ಟಿçಯನ್ನು ಲೀಜ್ ಪಡೆದಿರುವ ರಾಕೇಶ ಶ್ರೀಗಿರಿ ನೀಡಿದ ದೂರಿನನ್ವಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.