10.20 ಎಕರೆ ಅರಣ್ಯ ಪ್ರದೇಶ ತೆರವು

JKD 3=2 TERAVU
ಜಮಖಂಡಿ ತಾಲೂಕಿನ ಕುಂಚನೂರ, ಜಕನೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಬೆಳೆದಿದ್ದ ಬೆಳೆಯನ್ನು ತೆರವುಗೊಳಿಸಿದ ಅರಣ್ಯಾಧಿಕಾರಿಗಳು.
Published on

ಜಮಖಂಡಿ: ತಾಲೂಕಿನ ಕುಂಚನೂರ, ಜಕನೂರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ 10.20 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ ಮಾರ್ಗದರ್ಶನದಲ್ಲಿ ಕುಂಚನೂರು ಅರಣ್ಯ ಸರ್ವೇ ನಂ. 111 ಮತ್ತು ಜಕನೂರ ಅರಣ್ಯ ಸರ್ವೇ ನಂ. 34ರಲ್ಲಿ ಒತ್ತುವರಿ ಮಾಡಿದ್ದ 10 ಎಕರೆ 20 ಗುಂಟೆ ಪ್ರದೇಶವನ್ನು ವಶಕ್ಕೆ ಪಡೆದು, ಅಲ್ಲಿ ಬೆಳೆದಿದ್ದ ಕಬ್ಬು, ಜೋಳದ ಬೆಳೆಗಳನ್ನು ನ್ಯಾಯಾಲಯದ ಆದೇಶದಂತೆ ತೆರವು ಮಾಡಿ ಇಲಾಖೆಯಿಂದ ಸಸಿಗಳನ್ನು ನೆಡಲಾಗಿದೆ.

ವಲಯ ಅರಣ್ಯಧಿಕಾರಿ ಪವನ್ ಕುರನಿಂಗ, ಉಪ ವಲಯ ಅರಣ್ಯಾಧಿಕಾರಿಗಳಾದ ಅಶ್ವಿನಿ ಮನ್ಮಿ, ಮಲ್ಲಿಕಾರ್ಜುನ ನಾವಿ, ಮಹೇಶ ಗುಡಿಮನಿ, ಆರ್.ಎಲ್.ಜಾಧವ, ಪಿ.ಎಸ್.ಪಾಟೀಲ, ಎಚ್.ವೈ.ಉಗಾರ, ಅರಣ್ಯ ಗಸ್ತು ಪಾಲಕರಾದ ರುದ್ರೇಶ ಮೇತ್ರಿ, ಸಿದ್ದು ಕುಳಲಿ, ವಿಠ್ಠಲ ಕುಬಕಡ್ಡಿ, ಶಶಿಧರ ಒಂಟಗೋಡಿ, ರಾಜಕಿರಣ ಬೆಳವಡಿ, ಅಕ್ಷತಾ ಜಂಬಗಿ, ಲಕ್ಷ್ಮಣ ಪಾಟೀಲ, ಮಹಾವೀರ ಆಲಗೂರ ಹಾಗೂ ಎಎಸ್‌ಐ ಕುಂಬಾರ, ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net