10.16 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ನಾವು ಕೊಡುವ ಟಾಸ್ಕ್ ಪೂರ್ಣಗೊಳಿಸಿದರೆ ಹೂಡಿದ ಹಣಕ್ಕೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಹಳೇ ಹುಬ್ಬಳ್ಳಿಯ ಯುವತಿಯೊಬ್ಬರಿಂದ ಬರೋಬ್ಬರಿ 10.16 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಫೋನ್ ಮೂಲಕ ಯುವತಿಗೆ ಕರೆ ಮಾಡಿದ ಅಪರಿಚಿತರು, ‘ವರ್ಕ್ ಫ್ರಾಂ ಹೋಮ್. ನಾವು ಕೊಡುವ ಟಾಸ್ಕ್ ಪೂರ್ಣಗೊಳಿಸಿ. ನಾವು ಕಳಿಸುವ ಲಿಂಕ್ ಓಪನ್ ಮಾಡಿ. ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ರೇಟಿಂಗ್ ನೀಡಿ ಸ್ಕ್ರೀನ್‌ಶಾಟ್ ಕಳುಹಿಸಬೇಕು. ಇದಕ್ಕೆ ಪ್ರತಿ ರೇಟಿಂಗ್‌ಗೆ 100 ರೂ. ನೀಡುವುದಾಗಿ’ ನಂಬಿಸಿದ್ದಾರೆ. 4 ಟಾಸ್ಕ್‌ಗಳಿಗೆ ರೇಟಿಂಗ್ ನೀಡಿ ಸ್ಕ್ರೀನ್ ಶಾಟ್ ಯುವತಿ ಕಳುಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ 400 ರೂ. ಲಭಿಸಿದೆ. ನಂತರ ಟೆಲಿಗ್ರಾಂ ಐಡಿಯೊಂದನ್ನು ಸರ್ಚ್ ಮಾಡಿ ಕೋಡ್ ಕಳುಹಿಸಲು ಅಪರಿಚಿತರು ಹೇಳಿದ್ದಾರೆ. ಇದಕ್ಕೆ ಪ್ರೀಪೇಯ್ಡ ಹಣ ಕೊಡುವಂತೆ ಹೇಳಿ, ಹಂತ ಹಂತವಾಗಿ 10,16,040 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net