

ಕಲಬುರಗಿ: ಶಕ್ತಿ ನಗರದ ಮನೆಯೊಂದರ ಬಾಗಿಲಿನ ಕೊಂಡಿ ಮುರಿದು ಒಳ ನುಗ್ಗಿದ ಕಳ್ಳರು, ₹ 45 ಸಾವಿರ ನಗದು ಹಾಗೂ ₹1 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಹಣಮಂತ ನಾಟೀಕಾರ ಮನೆಯಲ್ಲಿ ಕಳ್ಳತನವಾಗಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 31ರ ಬೆಳಿಗ್ಗೆ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರು ಹೊರ ಹೋಗಿದ್ದರು. ಕೆಲ ಹೊತ್ತಿನ ಬಳಿಕ ವಾಪಸ್ ಬಂದು ನೋಡಿದಾಗ ಬಾಗಿಲಿನ ಕೊಂಡಿ ಮುರಿದಿತ್ತು. ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ನಗದು ಹಾಗೂ ಚಿನ್ನಾಭರಣ ಕಳುವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.