

ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಯು.ಜಿ.ಸಿ ಮಾನ್ಯತೆ ಪಡೆದಿರುವ 61 ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭವಾಗಿದ್ದು,ಪ್ರಸ್ತುತ ಸಾಲಿನಲ್ಲಿ 1 ಲಕ್ಷ ಪ್ರವೇಶಾತಿ ಗುರಿ ಹೊಂದಲಾಗಿದೆ ಎಂದು ಕೆಎಸ್‌ಓಯು ಕುಲಸಚಿವ ಪ್ರೊ.ಕೆ.ಎಲ್.ಎನ್ ಮೂರ್ತಿ ತಿಳಿಸಿದರು.
ರಾಜ್ಯಾದ್ಯಂತ 34 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಸಾಂಪ್ರದಾಯಕ (ರೆಗ್ಯೂಲರ್) ವಿವಿಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಉನ್ನತ ಶಿಕ್ಷಣ ಕೊಡುವಲ್ಲಿ ಕೆಎಸ್‌ಓಯು ಮುಂಚೂಣಿಯಲ್ಲಿ. ಅಲ್ಲದೇ ಶಿಕ್ಷಣಕ್ರಮಗಳಿಗೆ ನ್ಯಾಕ್ ಎ+ ಮಾನ್ಯತೆ ಪಡೆದಿದ್ದು, ರಾಜ್ಯದಲ್ಲಿ ದೂರ ಶಿಕ್ಷಣ ನೀಡುತ್ತಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2023-24ರ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್‌ಗಳ ಪ್ರವೇಶಾತಿ ಪ್ರಾರಂಭವಾಗಿದೆ. ಜುಲೈ 1 ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೂ ನಡೆಯಲಿದೆ. 2023-24 ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಸ್ನಾತಕ, ಸ್ನಾತಕೋತ್ತರ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಲ್‌ಐಎಸ್ಸಿ, ಹಾಗೂ ಬಿಎಸ್ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್‌ಐಎಸ್ಸಿ, ಎಂಸಿಎ, ಎಂಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ ಪ್ರೋಗ್ರಾಮ್ಸ್, ಡಿಪ್ಲೋಮಾ ಪ್ರೋಗ್ರಾಮ್ಸ್., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶಾತಿ ನಡೆಯುತ್ತಿದೆ ಎಂದರು.
ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ರೆಗ್ಯೂಲರ್ ಪದ್ಧತಿಯಲ್ಲಿ ಒಂದು ಕೋರ್ಸ್, ದೂರ ಶಿಕ್ಷಣದಲ್ಲಿ ಇನ್ನೊಂದು ಕೋರ್ಸ್ ಏಕಕಾಲದಲ್ಲೇ ಮಾಡಲು ಅವಕಾಶವಿದೆ. ಇತರೆ ಕಾಲೇಜಿನಲ್ಲಿ ರೆಗ್ಯೂಲರ್ ಓದುತ್ತಿರುವ ವಿದ್ಯಾರ್ಥಿ ಮೊದಲ ವರ್ಷ ವ್ಯಾಸಾಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಎರಡು ಮತ್ತು ಮೂರನೇ ವರ್ಷವನ್ನು ಲ್ಯಾಂಟರ್ ಪ್ರವೇಶ ಅಥವಾ ನೇರ ಪ್ರವೇಶದ ಮೂಲಕ ಪದವಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ವಾರ್ಷಿಕ, ಸೆಮಿಷ್ಟರ್ ಪರೀಕ್ಷೆಗಳು ಹಾಸನದ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲೇ ನಡೆಯುತ್ತವೆ. ವಾರಾಂತ್ಯ ಸಂಪರ್ಕ ತರಗತಿಗಳನ್ನೂ ಇಲ್ಲೇ ನಡೆಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ, ಪ್ರತಿ ತಾಲ್ಲೂಕಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ. ಎಲ್ಲಾ ಶೈಕ್ಷಣಿಕ ಕ್ರಮಗಳ ಕಲಿಕಾ ಅಧ್ಯಯನ ಸಾಮಗ್ರಿ ಡಿಜಿಟಲೀಕರಣ, ಪ್ರತ್ಯೇಕ ಕೆಎಸ್‌ಓಂುು ಸ್ಟೂಟೆಂಡ್ ಆಪ್ಯ ಬಳಕೆ, ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗ ರಚನೆ, ರಾಜ್ಯದ ಎಲ್ಲೆಡೆ ಕೌಶಲ್ಯಾಭಿವೃದ್ದಿ ತರಬೇತಿ ಶಿಬಿರಗಳ ಆಯೋಜನೆ. ಯೂಟ್ಯೂಬ್ ಚಾನೆಲ್ ಸ್ಥಾಪನೆ, ಅಧ್ಯಾಪಕರ ಬೋಧನಾ ವಿಡಿಯೋ ವಿದ್ಯಾರ್ಥಿಗಳಿಗೆ ಲಭ್ಯ, ಕರಾಮುವಿ ಪ್ರಸಾರಾಂಗ ರೇಡಿಯೋ ಸ್ಥಾಪನೆ. ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮೂಲಕ ಅತ್ಯಂತ ಕನಿಷ್ಠ ಶುಲ್ಕದಲ್ಲಿ ತರಬೇತಿ, ಡಿಜಿಟಲ್ ಮೌಲ್ಯಮಾಪನದ ಮೂಲಕ ಗುಣಮಟ್ಟದ ಮೌಲ್ಯಮಾಪನ, ಶೀಘ್ರ ಫಲಿತಾಂಶ ಪ್ರಕಟಣೆಗೆ ಅನುಕೂಲ ಮಾಡಿಕೊಡುವುದು. ಹೆಚ್ಚಿನ ವಿವರಗಳಿಗಾಗಿ 9482603060, 8197818807, 9739402474, 7760494941 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಹಾಸನ ಪ್ರಾದೇಶಿಕ ನಿರ್ದೇಶಕ ಪಿ.ಜಗದೀಶ, ಸೋಮಶೇಖರ್, ಜಗದೀಶ್ ಇದ್ದರು.