1 ಲಕ್ಷ ರೂಪಾಯಿ ಮರಳಿಸಿ ಪ್ರಮಾಣಿಕತೆ ಮೆರೆದ ನಿರ್ವಾಹಕ

Money11111
ಬಸ್‌ನಲ್ಲಿ 1 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ ಪ್ರಯಾಣಿಕನಿಗೆ ನಿರ್ವಾಹಕ ರಾಜೇಗೌಡ ಮತ್ತು ಚಾಲಕ ಶಿವಾನಂದ ಜೋಡಟ್ಟಿ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
Published on

ಬೆಳಗಾವಿ: ಬಸ್ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಒಂದು ಲಕ್ಷ ರೂ. ನಗದನ್ನು ಬೆಳಗಾವಿ ಡಿಪೋದ ಬಸ್ ಚಾಲಕ ಮತ್ತು ನಿರ್ವಾಹಕರು ಶನಿವಾರದಂದು ವಾರಸುದಾರರಿಗೆ ಮರಳಿ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ನಿರ್ವಾಹಕ ರಾಜೇಗೌಡ ಮತ್ತು ಚಾಲಕ ಶಿವಾನಂದ ಜೋಡಟ್ಟಿ ಹಣ ಮರಳಿಸಿದವರು. ಬೆಂಗಳೂರು-ಬೆಳಗಾವಿ ರಾಜಹಂಸ ಬಸ್‌ನಲ್ಲಿ ಹುಬ್ಬಳ್ಳಿಗೆ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದರು. ಬಸ್ ಹಾವೇರಿ ಜಿಲ್ಲೆಯ ಬಂಕಾಪುರ ಬಳಿಯ ಟೋಲ್ ನಾಕಾದಲ್ಲಿ ಆಗಮಿಸಿದ ಸಂದರ್ಭದಲ್ಲಿ ಇಳಿದು ಶೌಚಗೃಹಕ್ಕೆ ತೆರಳಿದ್ದರು. ಸ್ವಲ್ಪ ಸಮಯದಲ್ಲೇ ಬಸ್ ಮುಂದೆ ಸಾಗಿತ್ತು. ಆದರೆ, ಬಸ್ ತಪ್ಪಿಸಿಕೊಂಡಿದ್ದ ಪ್ರಯಾಣಿಕರ ಲಕ್ಷ ರೂ. ನಗದು, ಕಾಗದ ಪತ್ರಗಳ ಬ್ಯಾಗ್ ಅದೇ ಬಸ್‌ನಲ್ಲಿ ಇತ್ತು. ನಂತರ ಬಸ್ ಬೆಳಗಾವಿ ತಲುಪಿತ್ತು.

ಬೆಳಗಾವಿಯಲ್ಲಿ ಬ್ಯಾಗ್ ನೋಡಿದ ನಿರ್ವಾಹಕ ಎಲ್ಲರನ್ನೂ ವಿಚಾರಿಸಿದಾಗ ನಮಗೆ ಗೊತ್ತಿಲ್ಲ ಎಂದು ಇತರ ಪ್ರಯಾಣಿಕರು ಹೇಳಿದ್ದಾರೆ. ಬಳಿಕ ಬ್ಯಾಗ್ ತಪಾಸಣೆ ನಡೆಸಿದ ನಿರ್ವಾಹಕ, ಅದರಲ್ಲಿನ ಕಾಗದ ಪತ್ರ ನೋಡಿ ಚಿತ್ರದುರ್ಗ ಮೂಲದ ವ್ಯಕ್ತಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಆ ಪ್ರಯಾಣಿಕ ಬೆಳಗಾವಿಗೆ ಆಗಮಿಸಿ ಕಳೆದುಕೊಂಡಿದ್ದ ನಗದು ಸಮೇತ ಬ್ಯಾಗ್ ಪಡೆದುಕೊಂಡಿದ್ದು, ಚಾಲಕ ಮತ್ತು ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net