ಬಳಂಜ ಶಾಲೆಗೆ 1 ಲಕ್ಷ ರೂ. ಯೋಜನೆ ಹಸ್ತಾಂತರ

jci
Published on

ಬೆಳ್ತಂಗಡಿ : ಜೆಸಿಐ ಭಾರತದ ಅಮೃತ ಮಹೋತ್ಸವ ವಷರ್ದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ ನೀಡಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ 1ಲಕ್ಷ ರೂ. ಮೊತ್ತದ ಶಾಶ್ವತ ಯೋಜನೆಗಳನ್ನು ಹಸ್ತಾಂತರ ಮಾಡಿದರು.

ಬಳಂಜ ಮತ್ತು ಅಟ್ಲಾಜೆ ಶಾಲೆಗೆ ಕಂಪ್ಯೂಟರ್ ಹಸ್ತಾಂತರ, ಬಳಂಜ ಶಾಲೆ ಮತ್ತು ಕಾಪಿನಡ್ಕ ರಸ್ತೆಗೆ ಬ್ಯಾರಿಕೇಡ್ ಹಸ್ತಾಂತರ ಮಾಡಲಾಯಿತು. ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಎಚ್.ಡಿ.ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಅವರನ್ನು ಬಳಂಜ ಶಾಲೆ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ಊರವರ ಪರವಾಗಿ ಗೌರವಿಸಲಾಯಿತು.

ವಲಯ 15ರ ಅಧ್ಯಕ್ಷ ಗಿರೀಶ್ ಎಸ್.ಪಿ., ಉಪಾಧ್ಯಕ್ಷ ಶಂಕರ್ ರಾವ್, ವಲಯ ಅಧಿಕಾರಿಗಳಾದ ಅಭಿಲಾಷ್, ಸತೀಶ್ ಪೂಜಾರಿ, ಬಳಂಜ ಶಾಲಾ ಮುಖ್ಯಶಿಕ್ಷಕಿ ಸುಲೋಚನಾ, ರೆನಿಲ್ಡಾ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಊರವರು, ಸಂಘ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಪ್ರಸಾದ್ ಬಿ.ಎಸ್. ವೇದಿಕೆ ಆಹ್ವಾನಿಸಿದರು, ಮಹಿಳಾ ಜೆಸಿ ಸಂಯೋಜಕಿ ಶೃತಿ ರಂಜಿತ್ ಜೆಸಿವಾಣಿ ಉದ್ಘೋಷಿಸಿದರು, ಪೂರ್ವಾಧ್ಯಕ್ಷ ಪ್ರಶಾಂತ್ ಲಾಯಿಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net