

ಸುಳ್ಯ: ಸಾಮಾಜಿಕ ಧುರೀಣ ಹಾಗೂ ನಿವೃತ್ತ ಯೋಧ ಅಡ್ಡಂತ್ತಡ್ಕ ದೇರಣ್ಣ ಗೌಡ ತಮ್ಮ 85ನೇ ಹುಟ್ಟುಹಬ್ಬವನ್ನು ಸುಳ್ಯದ ಸಾಂದೀಪ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡರು. ಸಾಂದೀಪ್ ವಿಶೇಷಚೇತನ ಶಾಲೆಗೆ 1 ಲಕ್ಷ ರೂ.ಚೆಕ್‌ನ್ನು ಶಾಲಾ ಸಂಚಾಲಕ ಎಂ.ಬಿ.ಸದಾಶಿವ ಅವರಿಗೆ ಹಸ್ತಾಂತರಿಸಿದರು.
ಅಡ್ಡಂತ್ತಡ್ಕ ದೇರಣ್ಣ ಗೌಡ ಹಾಗೂ ಚಂದ್ರಕಲಾ ದೇರಣ್ಣ ಗೌಡ ದಂಪತಿಯನ್ನು ಸಂಸ್ಥೆಯ ವತಿಯಿಂದ ಹಾಗೂ ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಕೆ.ಎಂ.ಎಫ್ ಉಪಾಧ್ಯಕ್ಷ ಜಯರಾಮ ರೈ ಬಳೆಜ್ಜ, ಸುಳ್ಯ ತಾಲೂಕು ಸೇವಾದಳದ ಅಧ್ಯಕ್ಷ ಪ್ರೊ.ದಾಮೋದರ ಗೌಡ, ಚಂದ್ರಶೇಖರ ನಂಜೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಶಾಲಾ ಮುಖ್ಯಶಿಕ್ಷಕಿ ಹರಿಣಿ ಸದಾಶಿವ, ಎಂ.ಬಿ.ಸಲಹಾ ಸಮಿತಿ ಸದಸ್ಯ ಯಶ್ವಿತ್ ಕಾಳಮ್ಮನೆ, ಸುಳ್ಯ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಎಂ.ಬಿ.ಫೌಂಡೇಷನ್ ಟ್ರಸ್ಟಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ನಿರೂಪಿಸಿದರು.