ಕಾರಿನಲ್ಲಿ ಸಾಗಿಸುತ್ತಿದ್ದ 1 ಕೆ.ಜಿ. ಗಾಂಜಾ ವಶ

arrest
Published on

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 1.300 ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವ ಹೊಸದುರ್ಗ ಠಾಣೆ ಪೊಲೀಸರು ಮಡಿಕೈ ನೆಲ್ಲಾಂಕುಯಿ ನಿವಾಸಿ ಮನೋಜ್ ಥಾಮಸ್(43) ಎಂಬಾತನನ್ನು ಬಂಧಿಸಿದ್ದಾರೆ.

ಆತ ಈ ಹಿಂದೆ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ನೇತೃತ್ವದ ಆಪರೇಷನ್ ಕ್ಲೀನ್ ಕಾಸರಗೋಡು ಅಂಗವಾಗಿ ಹೊಸದುರ್ಗ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ಹಾಗೂ ಎಸ್‌ಐ ಕೆ.ಪಿ.ಸತೀಶನ್ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾವುಂಗಲ್ ಕ್ರೈಸ್ಟ್ ಸ್ಕೂಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭ ಕಾರಿನಲ್ಲಿ ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net