ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ

BKL ROAD
Published on

ಭಟ್ಕಳ: ಇಪ್ಪತ್ತು ವರ್ಷಗಳಿಂದ ಕಾಣುತ್ತಿದ್ದ ರಸ್ತೆ, ಚರಂಡಿ ನಿರ್ಮಾಣದ ಕನಸು ಈಗ ನನಸಾಗುತ್ತಿದೆ ಎಂದು ಜಿಎಸ್‌ಬಿ ಸಮಾಜದ ಮುಖಂಡ ಅಚ್ಯುತ ಕಾಮತ್ ಹೇಳಿದರು.

ಪಟ್ಟಣದ ನೆಹರು ರಸ್ತೆಯ ಕಾಮಾಕ್ಷಿ ದೇವಸ್ಥಾನ ಬಳಿ 1 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಮಂಗಳವಾರ ಏರ್ಪಡಿಸಿದ್ದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಟ್ಟಣದ ನೆಹರು ರಸ್ತೆಯ ಕಾಮಾಕ್ಷಿ ದೇವಸ್ಥಾನದ ಎದುರಿನಿಂದ ಮಕ್ಕಳ ಕಟ್ಟೆಯವರೆಗೆ ಕಾಮಗಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ಸಚಿವ ಮಂಕಾಳ ವೈದ್ಯ ಅವರ ಕಾಳಜಿ ಶ್ಲಾಘನೀಯ ಎಂದರು.

ನರೇಂದ್ರ ನಾಯಕ ಮಾತನಾಡಿ, ಕಳೆದ 20 ವರ್ಷಗಳ ಸಮಸ್ಯೆಗೆ ಮುಕ್ತಿ ದೊರಕಿದೆ. ಸಚಿವ ಮಂಕಾಳ ವೈದ್ಯ ನಮ್ಮ ಮನವಿಗೆ ಸ್ಪಂದಿಸಿ ಅನುದಾನ ಒದಗಿಸಿದ್ದಾರೆ ಎಂದರು.

ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ ಭೂಮಿಪೂಜೆ ನೆರವೆರಿಸಿದರು. ವೆ.ಮೂ. ವಿನೋದ ಭಟ್ ಪೂಜೆ ನಡೆಸಿ ಪ್ರಾರ್ಥಿಸಿದರು.

ಜಿಎಸ್‌ಬಿ ಸಮಾಜದ ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ಪೈ, ಕಾಮಾಕ್ಷಿ ದೇವಸ್ಥಾನದ ಟ್ರಸ್ಟಿ ಗಿರಿಧರ ನಾಯಕ, ಪುರಸಭೆ ಮಾಜಿ ಸದಸ್ಯ ಉದಯ ಪೈ, ಪ್ರಸನ್ನ ನಾಯಕ, ಗಣಪತಿ ಬಾಬಾ ಭಟ್, ವಿನೋದ ಮೋಹನ ಪಡಿಯಾರ, ಗುರುಪ್ರಸಾದ ಸಂದರ ಪಡಿಯಾರ, ವಾಸುದೇವ ನಾಯಕ, ಉದಯ ಶೆಟ್ಟಿ, ಶಾಲಿನಿ ಶೆಟ್ಟಿ, ಆಕಾಶ ಶೆಟ್ಟಿ, ನಂದು ಕಾಮಕರ್, ಗಣೇಶ ಭಟ್ಕಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net