

ಕಾರವಾರ: ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳ ರೆಕಾರ್ಡ್ ರೂಂನಲ್ಲಿರುವ ಕಂದಾಯ ದಾಖಲೆಯ 1.97 ಕೋಟಿ ಪುಟಗಳನ್ನು ಸ್ಕಾ÷್ಯನ್ ಮಾಡಿ ಇದುವರೆಗೆ ಭೂ ಸುರಕ್ಷಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ನೂರಾರು ವರ್ಷಗಳ ಹಳೆಯ ಕಂದಾಯ ದಾಖಲೆಗಳನ್ನು ಸಂರಕ್ಷಿಸಲು, ಜನರಿಗೆ ಸುಲಭವಾಗಿ ಅವುಗಳು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲು ಹಾಗೂ ದಾಖಲೆಗಳನ್ನು ತಿದ್ದಿ ಅಕ್ರಮಗಳನ್ನು ನಡೆಸುವುದನ್ನು ತಡೆಯಲು ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಬರದಿಂದ ಸಾಗಿದೆ.
ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸಿ ಕಚೇರಿಯ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣವಾಗಿದೆ. ಮೊದಲ ಹಂತದಲ್ಲಿ ಶಿರಸಿ ತಾಲೂಕು ತಹಸೀಲ್ದಾರ್ ಕಚೇರಿಯ ರೆಕಾರ್ಡ್ ರೂಂ ಅನ್ನು ಪೈಲಟ್ ಯೋಜನೆಯಾಗಿ ಸ್ವೀಕರಿಸಲಾಗಿತ್ತು. ಕಳೆದ ವರ್ಷ ಜನವರಿಯಿಂದಲೇ ಕಡತಗಳನ್ನು ಹಾಗೂ ನೋಂದಣಿಗಳನ್ನು ಸ್ಕ್ಯಾನ್ ಮಾಡಿ ಅವುಗಳನ್ನು ಅಪ್‌ಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿತ್ತು. ಈ ವರ್ಷ(2025) ಜನವರಿಯಿಂದ ಎಲ್ಲ ತಾಲೂಕುಗಳಿಗೆ ಈ ಯೋಜನೆ ವಿಸ್ತರಿಸಲಾಗಿದೆ.
ಜುಲೈ 20 ರ ವರದಿಯಂತೆ ಶಿರಸಿಯಲ್ಲಿ 60 ಲಕ್ಷ ಕಡತ ಹಾಗೂ ನೋಂದಣಿಗಳಿವೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಇನ್ನು 12.38 ಲಕ್ಷ ಕಡತ ಹಾಗೂ ನೋಂದಣಿ ದಾಖಲೆಗಳನ್ನು ಮಾತ್ರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಬಾಕಿ ಇದೆ. ಎಂದರೆ ಕಳೆದ ಒಂದುವರೆ ವರ್ಷಗಳಲ್ಲಿ ಶಿರಸಿಯಲ್ಲಿ ಶೇ.49.47 ರಷ್ಟು ಕಡತಗಳನ್ನು,ಶೇ.75.53 ರಷ್ಟು ನೋಂದಣಿ ದಾಖಲೆಗಳನ್ನು ಸ್ಕಾ÷್ಯನ್ ಮಾಡಿ ಅಪ್‌ಲೋಡ್ ಮಾಡಲಾಗಿದೆ.
ಕಳೆದ ಆರುವರೆ ತಿಂಗಳಲ್ಲಿ ಶಿರಸಿ ಹೊರತುಪಡಿಸಿ ಜಿಲ್ಲೆಯ ಇತರ 11 ತಾಲೂಕುಗಳಲ್ಲಿ ಕಡತಗಳ ಸ್ಕಾ÷್ಯನಿಂಗ್‌ನಲ್ಲಿ ಶೇ.13.80 ಹಾಗೂ ನೋಂದಣಿ ದಾಖಲೆಗಳ ಡಿಜಿಟಲೀಕರಣದಲ್ಲಿ ಶೇ.59.04 ರಷ್ಟು ಪ್ರಗತಿಯಾಗಿದೆ. ಎಂದರೆ 11 ತಾಲೂಕುಗಳಲ್ಲಿ ಒಟ್ಟು 53,312 ರಿಜಿಸ್ಟರ್‌ಗಳಿವೆ ಎಂದು ಲೆಕ್ಕ ಹಾಕಲಾಗಿದೆ. ಅದರಲ್ಲಿ 31,474 ರಿಜಿಸ್ಟರ್‌ಗಳ 89.65 ಲಕ್ಷ ಪುಟಗಳನ್ನು ಅಪ್‌ಲೋಡ್ ಮಾಡಲಾಗಿದೆ. 11 ತಾಲೂಕುಗಳಲ್ಲಿ ಒಟ್ಟು 11.67 ಲಕ್ಷ ಕಡತಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ 1,61,161 ಕಡತಗಳ 61.70 ಲಕ್ಷ ಪುಟಗಳನ್ನು ಸ್ಕಾ÷್ಯನ್ ಮಾಡಿ ಅಪ್‌ಲೋಡ್ ಮಾಡಲಾಗಿದೆ. ಕಡತಗಳ ಸ್ಕ್ಯಾನ್ ಕುಮಟಾ ಅತ್ಯಂತ ಹಿಂದಿದ್ದು, ಶೇ.0.6 ರಷ್ಟು ಮಾತ್ರ ಸಾಧನೆ ಮಾಡಿದೆ.
ದಾಖಲೆಗಳ ಡಿಜಿಟಲೀಕರಣ ತಾಲೂಕುವಾರು ಮಾಹಿತಿ ತಾಲೂಕು ಒಟ್ಟು ಕಡತಗಳು ಅಪ್‌ಲೋಡ್ ಆದವು ಒಟ್ಟು ರಿಜಿಸ್ಟರ್‌ಗಳು ಅಪ್‌ಲೋಡ್ ಆದವು