ರಾಷ್ಟ್ರೀಯ ಟಿಬಿ ನಿವಾರಣಾ ಕಾರ್ಯಕ್ರಮಕ್ಕೆ ಎಂಆರ್‌ಪಿಎಲ್‌ನಿಂದ 1ಕೋ.ರೂ ಕೊಡುಗೆ

mng_4 oct MRPL
ಎಂಆರ್‌ಪಿಲ್ ಸಿಎಸ್‌ಆರ್ ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದ.ಕ ಆರೋಗ್ಯ ಅಧಿಕಾರಿ ಡಾ. ಎಚ್‌ಆರ್ ತಿಮ್ಮಯ್ಯ ಅವರಿಗೆ ಔಪಚಾರಿಕವಾಗಿ ಎಂಆರ್‌ಪಿಎಲ್‌ನ ಸಿಎಸ್‌ಆರ್ ನೆರವನ್ನು ಹಸ್ತಾಂತರಿಸಿದರು.
Published on

ಮಂಗಳೂರು: 2025ರ ವೇಳೆಗೆ ಟಿಬಿ ಮುಕ್ತ ಭಾರತ ಯೋಜನೆಯ ಭಾಗವಾಗಿರುವ ರಾಷ್ಟ್ರೀಯ ಟಿಬಿ ನಿವಾರಣಾ ಕಾರ್ಯಕ್ರಮಕ್ಕೆ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್) 1ಕೋ.ರೂಪಾಯಿ ಸಿಎಸ್‌ಆರ್ ನೆರವನ್ನು ನೀಡಿದೆ.

ಕ್ಷಯರೋಗದ ಆರಂಭಿಕ ರೋಗಪತ್ತೆ ಹಾಗೂ ಚಿಕಿತ್ಸೆಗೆ ನೆರವಾಗುವ ಸಿಬಿ-ಎನ್‌ಎಎಟಿ(ಕಾರ್ಟ್ರಿಡ್ಜ್-ಆಧಾರಿತ ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್) ನಾಲ್ಕು ಯಂತ್ರ ಖರೀದಿಗೆ 1ಕೋ.ರೂ.ಸಿಎಸ್‌ಆರ್ ನೆರವನ್ನು ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋರಿಕೆಯಂತೆ ಎಂಆರ್‌ಪಿಎಲ್ ಈ ಸಹಾಯಹಸ್ತ ನೀಡಿದ್ದು, ದ.ಕ ಹಾಗೂ ಉಡುಪಿಜಿಲ್ಲೆಯ ಜನರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ.

ಎಂಆರ್‌ಪಿಲ್ ಸಿಎಸ್‌ಆರ್ ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದ.ಕ ಆರೋಗ್ಯ ಅಧಿಕಾರಿ ಡಾ. ಎಚ್‌ಆರ್ ತಿಮ್ಮಯ್ಯ ಅವರಿಗೆ ಔಪಚಾರಿಕವಾಗಿ ಸಿಎಸ್‌ಆರ್ ನೆರವನ್ನು ಹಸ್ತಾಂತರಿಸಿದರು. ಈವೇಳೆ ಎಂಆರ್‌ಪಿಎಲ್ ಅಧಿಕಾರಿಗಳಾದ ಡಾ. ಜಾಹಿದ್ ಅಲಿ ಖಾನ್, ಡಾ. ಆರ್.ಅರವಿಂದನ್ ಮತ್ತು ಸ್ಟೀವನ್ ಪಿಂಟೋ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net