

ಚಿಕ್ಕಮಗಳೂರು: ನಗರದ ದಿವಿಜ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಈ ಸಾಲಿನಲ್ಲಿ ೧.೯೮ ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ.ಎಚ್.ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಅತ್ಯಂತ ಪ್ರಗತಿಯ ಪಥದಲ್ಲಿ ನಡೆಯುತ್ತಿದ್ದು, ೨೦೧೧ ರಲ್ಲಿ ಆಸಕ್ತ ಷೇರುದಾರರಿಂದ ಆರಂಭವಾದ ಈ ಸೌಹಾರ್ದ ಸಂಸ್ಥೆ ಮೊದಲ ವರ್ಷದಿಂದಲೇ ಲಾಭದಲ್ಲಿ ನಡೆಯುತ್ತಿದ್ದು, ವಿವಿಧ ರೀತಿಯ ಠೇವಣಿಗಳನ್ನು ಹೊಂದಿದೆ. ೨೦೨೩ರ ಮಾರ್ಚ್ ೩೧ರವರೆಗೆ ಬ್ಯಾಂಕ್‌ನಲ್ಲಿ ೧೦.೮೪ ಕೋಟಿ ರೂ. ಠೇವಣಿ ಇದ್ದು, ಇದರಲ್ಲಿ ಮುದ್ದತು ಠೇವಣಿ ಬಾಬ್ತು ೬.೨೯ ಕೋಟಿ ರೂ., ಸಂಚಿತ ಠೇವಣಿ ಬಾಬ್ತು ೫೨.೧೦ ಲಕ್ಷ ರೂ., ಪಿಗ್ಮಿ ಠೇವಣಿ ಬಾಬ್ತು ೨೬.೨೨ ಲಕ್ಷ ರೂ., ಉಳಿತಾಯ ಖಾತೆಯಲ್ಲಿ ೧.೩೨ ಕೋಟಿ ರೂ., ದಿವಿಜ ನಗದು ಸರ್ಟಿಫಿಕೇಟ್‌ನಲ್ಲಿ ೨.೪೫ ಕೋಟಿ ರೂ. ಹೊಂದಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಲಾಗುತ್ತಿದ್ದು, ಬ್ಯಾಂಕ್‌ನಲ್ಲಿ ಗೃಹ ನಿರ್ಮಾಣ ಸಾಲ, ಅಡಮಾನ ಸಾಲ, ವೇತನ ಆಧಾರ ಸಾಲ, ವ್ಯಾಪಾರ ಸಾಲ, ಠೇವಣಿ ಆಧಾರ ಸಾಲ, ರೆಡಿಮನಿ ಯೋಜನೆ, ಜೀವವಿಮೆ ಆಧಾರ ಸಾಲ, ಮೀರಳತೆ ಸಾಲ ಚಿನ್ನಾಭರಣ ಸಾಲ ಮತ್ತು ನಗದು ಪ್ರಮಾಣ ಪತ್ರ ಸಾಲ ಸೇರಿದಂತೆ ಈವರೆಗೂ ೧೫ ಕೋಟಿ ರೂ. ಸಾಲ ವಿತರಿಸಲಾಗಿದೆ.
ಬ್ಯಾಂಕ್ ಅತ್ಯಂತ ಪ್ರಗತಿ ಪಥದಲ್ಲಿರುವ ಹಿನ್ನೆಲೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಆಲೋಚಿಸಿದ್ದು, ೨೦೨೪-೨೫ ರಲ್ಲಿ ಸಹಕಾರಿಯ ವ್ಯವಹಾರಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಆಲೋಚಿಸಲಾಗಿದೆ. ಈ ವರ್ಷದಲ್ಲಿ ೧೯ ಕೋಟಿ ರೂ.ಗಳ ವಹಿವಾಟು ನಡೆಸಲು ನಿರ್ದೇಶಕ ಮಂಡಳಿ ಉz್ದೆÃಶಿಸಲಾಗಿದೆ. ವಿವಿಧ ರೀತಿಯ ಠೇವಣಿ ಯೋಜನೆಗಳಿಂದ ೧೨ ಕೋಟಿ ರೂ. ಸಂಗ್ರಹಿಸುವ ಉz್ದÉÃಶವಿದೆ ಎಂದು ತಿಳಿಸಿದ್ದಾರೆ.