ಭಾರತದಿಂದ 1.92 ಲಕ್ಷ ಸಾವಿರ ಟನ್ ಸಗಣಿ ರಫ್ತ್ತು

nrp 1
Published on

ಎನ್.ಆರ್.ಪುರ: ಭಾರತದಿಂದ 1.92 ಲಕ್ಷ ಸಾವಿರ ಟನ್ ಸಗಣಿ ವಿದೇಶಕ್ಕೆ ರಪ್ತು ಮಾಡಲಾಗುತ್ತಿದೆ ಎಂದು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಅಂಜನ್ ಕುಮಾರ್ ಹೇಳಿದರು.

ಸೀತೂರಿನ ವಿಎಸ್‌ಎಸ್‌ಎನ್‌ನ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಸೀತೂರು ವಿಎಸ್‌ಎಸ್‌ಎನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾಳುಮೆಣಸು ಮತ್ತು ಅಡಕೆ ಬೆಳೆಗಳ ಆರೈಕೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ, ದನದ ಸಗಣಿಯಲ್ಲಿ ಇರುವ ಸೂಕ್ಷ್ಮಾಣು ಜೀವಿ ಬೇರೆ ಯಾವುದೇ ಗೊಬ್ಬರದಲ್ಲಿ ಇಲ್ಲ. ಇದನ್ನು ಅರಿತ ವಿದೇಶಿಯರು ಭಾರತ ಸಗಣಿಯನ್ನು ಖರೀದಿ ಮಾಡುತ್ತಿದ್ದಾರೆ. ಪ್ರತಿಯೊಬ್ಬ ರೈತರು 3 ವರ್ಷಕ್ಕೊಮ್ಮೆ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿ ಭೂಮಿ ಅಗತ್ಯವಿರುವ ಗೊಬ್ಬರಗಳನ್ನು ನೀಡಬೇಕು ಎಂದರು.

ಕೃಷಿ ಮಾಡುವಾಗ ಶ್ರದ್ಧೆಯಿಂದ ಮಾಡಿದರೆ ಫಲ ಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಹವಮಾನ ವೈಪರೀತ್ಯದಿಂಧ ಅಡಕೆ ಹಾಗೂ ಇತರ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಬೆಳೆ ಚೆನ್ನಾಗಿ ಬರಲು ಮಣ್ಣಿನ ಪೋಷಣೆ ಅಗತ್ಯ. ಭತ್ತದ ಗದ್ದೆಗಳಲ್ಲಿ ಅಡಕೆ ಗಿಡ ನೆಡಲು ತೋಟಗಾರಿಕೆ ಸಂಶೋಧನಾ ಕೇಂದ್ರ ಶಿಫಾರಸ್ಸು ಮಾಡುವುದಿಲ್ಲ. ಕಳೆ ನಾಶಕ ಸಿಂಪಡಣೆಯಿಂದ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net