

ಮಂಗಳೂರು: ಕೇಂದ್ರ ಸರ್ಕಾರ ಅಮಾನ್ಯ ಮಾಡಿದ ಒಂದು ಸಾವಿರ ಹಾಗು ಐದು ನೂರು ಮುಖ ಬೆಲೆಯ 1.92 ಕೋಟಿ ರೂ. ಮೌಲ್ಯದ ನೋಟುಗಳನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.
ಕಣ್ಣೂರು ಬೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ ಹಾಗು ದೀಪಕ್ ಕುಮಾರ್, ಬಜಪೆಯ ನಾಸೀರ್ ಎಂಬವರನ್ನು ಬಂಧಿಸಿದ್ದಾರೆ.
ಒಂದು ಸಾವಿರ ಮುಖ ಬೆಲೆಯ 50 ಲಕ್ಷ ರೂ.ಹಾಗು 500 ಮುಖ ಬೆಲೆಯ 1 ಕೋಟಿ ರೂ. ಪತ್ತೆಯಾಗಿದೆ.
ಕಳವು ಪ್ರಕರಣಕ್ಕೆ
ಬರ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಈ ಹಣ ಪತ್ತೆಯಾಗಿದೆ.
ಶಿವಮೊಗ್ಗ, ಚಿತ್ರದುರ್ಗ ಕಡೆಯಿಂದ ತಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಸತ್ಯಾ ಸತ್ಯತೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.