

ಮೈಸೂರು: ಕೆವೈಸಿ ವಿಚಾರದಲ್ಲಿ ಅಕೌಂಟ್ ಸ್ಥಗಿತವಾಗಿದೆ ಎಂಬ ಎಸ್‌ಎಂಎಸ್ ಮೆಸೇಜ್‌ಗೆ ಸ್ಪಂದಿಸಿದ ಮಹಿಳೆಯೊಬ್ಬರು 1.90 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಮಹದೇವಪುರ ನಿವಾಸಿ ಲತಾ ಹಣ ಕಳೆದುಕೊಂಡವರು. ಇವರ ಮೊಬೈಲ್‌ಗೆ ಅನಾಮಧೇಯ ನಂಬರ್‌ನಿಂದ ಸಂದೇಶ ಬಂದಿದೆ. ಅದರಲ್ಲಿ ಕೆವೈಸಿ ವಿಚಾರವಾಗಿ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗಿದೆ ಎಂದು ನಮೂದಾಗಿತ್ತು. ಮಾಹಿತಿ ಬೇಕಿದ್ದಲ್ಲಿ ಕರೆ ಮಾಡಿ ಎಂಬ ಸಂದೇಶಕ್ಕೆ ಲತಾ ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ.
ವಂಚಕ ಕೇಳಿದಂತೆ ಆಧಾರ್ ಕಾರ್ಡ್, ಒಟಿಪಿ ನಂಬರ್ ನೀಡಿದ್ದಾರೆ. ಕ್ಷಣಮಾತ್ರದಲ್ಲಿ ಅವರ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಹಣ ಒಂದೇ ಸಲಕ್ಕೆ ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಈ ಕುರಿತು ಲತಾ ಅವರು ನೀಡಿದ ದೂರಿನ ಅನ್ವಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.