1.83 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಧಾರವಾಡದ ಶಕ್ತಿ ನಗರ ನಿವಾಸಿ ಅಲ್ಬರ್ಟ್ ಮರಿಯಪ್ಪ ಎಂಬುವರಿಂದ 1.83 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಎಟಿಎಂ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂದು ನಂಬಿಸಿದ ಅಪರಿಚಿತ ವ್ಯಕ್ತಿ, ಒಟಿಪಿ ಪಡೆದಿದ್ದಾನೆ. ನಂತರ ಬ್ಯಾಂಕ್ ಖಾತೆಯಿಂದ ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net