ಒಂದೇ ದಿನ 1.81ಲಕ್ಷ ಚೀಲ ಮೆಣಸಿನಕಾಯಿ ಆವಕ

Byd Chilli
Published on

ಬ್ಯಾಡಗಿ: ಇಲ್ಲಿನ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರದ ಟೆಂಡರ್‌ನಲ್ಲಿ 1,81,384 ಚೀಲಗಳು ಆವಕವಾಗಿವೆ. ಒಂದು ವಾರದಲ್ಲಿ 3 ಲಕ್ಷಕ್ಕೂ ಅಧಿಕ ಚೀಲ ಮಾರಾಟವಾಗಿದ್ದು ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಕಡ್ಡಿ ಸರಾಸರಿ 38 ಸಾವಿರ ರೂ. ಹಾಗೂ ಡಬ್ಬಿ ತಳಿಗೆ 42 ಸಾವಿರ ರೂ. ಬೆಲೆಯಲ್ಲಿ ಮಾರಾಟವಾಗಿದೆ. ಒಂದೇ ದಿನದಲ್ಲಿ ಅಂದಾಜು 35 ಲಕ್ಷ ರೂ. ಮಾರುಕಟ್ಟೆ ಶುಲ್ಕ ದಾಟುವ ನಿರೀಕ್ಷೆಯಿದ್ದು, ವಾರದಲ್ಲಿ ಅಂದಾಜು 70 ಲಕ್ಷ ರೂ. ಶುಲ್ಕ ಜಮೆಯಾಗಿರುವುದಾಗಿ ತಿಳಿದುಬಂದಿದೆ.

ಸುಮಾರು 2 ಲಕ್ಷ ಚೀಲ ಮೆಣಸಿನಕಾಯಿ ಬಂದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಂಗಡಿ ಬಳಿ ವಾಹನ ನಿಲ್ಲಿಸಲು ಜಾಗ ಇಲ್ಲದ ಕಾರಣ ಮೆಣಸಿನಕಾಯಿ ಇಳಿಸದೆ, ಮರುದಿನ ಟೆಂಡರ್ ಹಾಕುವ ಸಲುವಾಗಿ ಕಾಯುತ್ತಿದ್ದಾರೆ.

ಸೋಮವಾರದ ಮಾರುಕಟ್ಟೆ ದರ

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ 2989-54499ರೂ., ಡಬ್ಬಿತಳಿ 3289-60169ರೂ., ಗುಂಟೂರು 1689-18289ರೂ. ಬೆಲೆಯಲ್ಲಿ ಮಾರಾಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net