ವಿಜಯಪುರ:ಸಿದ್ದೇಶ್ವರ ಬ್ಯಾಂಕ್‌ಗೆ 1.75 ಕೋಟಿ ರೂ. ನಿವ್ವಳ ಲಾಭ

IMG_5007
ವಿಜಯಪುರ ನಗರದ ಬಂಥನಾಳ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ 110ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ಎಸ್. ಬಗಲಿ, ಉಪಾಧ್ಯಕ್ಷೆ ಬೋರಮ್ಮ ಬಿ. ಗೊಬ್ಬೂರ, ನಿರ್ದೇಶಕರಾದ ಶ್ರೀಹರ್ಷ ಎಸ್ ಪಾಟೀಲ, ರವೀಂದ್ರ.ಎಸ್.ಬಿಜ್ಜರಗಿ, ರಮೇಶ ಬಿದನೂರ ಮತ್ತಿತರಿದ್ದರು.
Published on

ವಿಜಯಪುರ : ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿದ್ದೇಶ್ವರ ಬ್ಯಾಂಕ್ 1.75 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ಎಸ್. ಬಗಲಿ ತಿಳಿಸಿದರು.

ನಗರದ ಬಂಥನಾಳ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ 110ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ನಿರ್ಮಾಣಕ್ಕೆ ಹಾಗೂ ವ್ಯವಹಾರಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುವುದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ರಾಜ್ಯದ ಸಹಕಾರಿ ರಂಗದಲ್ಲಿ ಬ್ಯಾಂಕುಗಳಲ್ಲಿ ಒಂದಾದ ನಮ್ಮ ಬ್ಯಾಂಕಿನ ಮೇಲೆ ಇರುವ ಠೇವಣಿದಾರರ ನಂಬಿಕೆಯಿಂದ 588.53 ಕೋಟಿ ರೂ. ಠೇವಣಿ ಹಾಗೂ 674.24 ಕೋಟಿ ರೂ.ದುಡಿಯುವ ಬಂಡವಾಳದೊಂದಿಗೆ ಸದಸ್ಯರ, ಗ್ರಾಹಕರ ಹಾಗೂ ನಾಗರಿಕರ ಸಕಲ ಬ್ಯಾಂಕಿನಿಂದ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಳೆದ ವರ್ಷದಲ್ಲಿ 54.78 ಕೋಟಿ ರೂ. ಆದಾಯ ಗಳಿಸಿದ್ದು, ಪ್ರಸ್ತುತ ವರ್ಷದಲ್ಲಿ 54.36 ಕೋಟಿ ರೂ. ಆದಾಯ ಹೊಂದಿದೆ. ಬ್ಯಾಂಕಿನ ಸರ್ವ ಆಡಳಿತ ಮಂಡಳಿ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.

ಸರ್ವ ಸದಸ್ಯರ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಬ್ಯಾಂಕು ಒಟ್ಟು 4.11 ಕೋಟಿ ರೂ.ಲಾಭ ಗಳಿಸಿದೆ. ಅದರಲ್ಲಿ 1.75 ಕೋಟಿ ರೂ. ನಿವ್ವಳ ಲಾಭ ಹೊಂದುವಲ್ಲಿ ಸಲರಾಗಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಹಾಗೂ ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಸಾಧನೆಗೈದ ಸಾಧಕರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.

ಉಪಾಧ್ಯಕ್ಷೆ ಬೋರಮ್ಮ ಬಿ. ಗೊಬ್ಬೂರ, ನಿರ್ದೇಶಕರಾದ ಶ್ರೀಹರ್ಷ ಎಸ್ ಪಾಟೀಲ, ಗುರು ಎಸ್.ಗಚ್ಚಿನಮಠ, ವಿಜಯಕುಮಾರ ಆರ್. ಅವರಂಗಬಾದ, ವಿಶ್ವನಾಥ ಪಾಟೀಲ (ಮಸಬಿನಾಳ), ಸುರೇಶ ಜಿ.ಗಚ್ಚಿನಕಟ್ಟಿ, ಈರಣ್ಣ ಪಟ್ಟಣಶೆಟ್ಟಿ, ರಾಜೇಂದ್ರ ಪಾಟೀಲ್ (ಉಪ್ಪಲದಿನ್ನಿ), ರಮೇಶ ಬಿದನೂರ, ರವೀಂದ್ರ.ಎಸ್.ಬಿಜ್ಜರಗಿ, ವಿಜಯಕುಮಾರ ಇಜೇರಿ, ವೈಜನಾಥ್ ಡಿ.ಕರ್ಪೂರಮಠ, ಶಾಂತಪ್ಪ ಎಸ್ ಜತ್ತಿ. ಸೌಭಾಗ್ಯ ಎಸ್.ಭೋಗಶೆಟ್ಟಿ, ಗುರುರಾಜ ಎಸ್.ಗಂಗನಹಳ್ಳಿ, ಸಾಯಬಣ್ಣಾ ಎಸ್.ಭೋವಿ, ಅಮೋಘಸಿದ್ಧ ಎಂ.ನಾಯ್ಕೋಡಿ, ಸಂಗನಗೌಡ ಎಸ್ ಪಾಟೀಲ, ಮಂಜುನಾಥ ಗುಂದಗಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಲ್.ಇಂಡಿ ಹಾಗೂ ಬ್ಯಾಂಕಿನ ಗ್ರಾಹಕರು, ಸರ್ವ ಸದಸ್ಯರು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net