ನಗ, ನಗದು ಇದ್ದ ಬ್ಯಾಗ್ ಕಳವು

theft
Published on

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುವಾಗ 5 ಸಾವಿರ ರೂ. ನಗದು ಮತ್ತು 1.73ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ರೈಲ್ವೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡಿನ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ. ಕೊಲ್ಲಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಕುಟುಂಬದವರೊಂದಿಗೆ ತೆರಳಿ, ಸೋಮವಾರ ಕಾಸರಗೋಡಿಗೆ ವಾಪಸಾಗುವಾಗುವಾಗ ನಗ, ನಗದು ಇದ್ದ ಬ್ಯಾಗ್ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net