

ಕೆಜಿಎಫ್- ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ದಾವೆಗಳ ತ್ವರಿತ ವಿಲೇವಾರಿಗಾಗಿ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ನಲ್ಲಿ ಒಂದೇ ದಿನ ಕೈಗೆತ್ತಿಕೊಳ್ಳಲಾದ 2,579 ಪ್ರಕರಣಗಳ ಪೈಕಿ 2,497 ಪ್ರಕರಣಗಳು ಇತ್ಯರ್ಥಗೊಂಡು, ಒಟ್ಟು 1.717 ಕೋಟಿ ರೂ. ಹಣ ಸಂಗ್ರಹವಾಗಿದೆ.
ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ನಲ್ಲಿ ರಾಜಿ ಮಾಡಿಕೊಳ್ಳಬಹುದಾದ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಾರ್ವಜನಿಕರು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಕಾರಣಾಂತರಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ 8 ಜೋಡಿಗಳ ಮನವೊಲಿಸಿ ಮತ್ತೆ ಒಂದಾಗಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಶಿರ್ಲೆ ಚಿಟ್ಟು& ನವೀನ್ ಕುಮಾರ್, ಉಮಾ ಮಹೇಶ್ವರಿ&ಶಾಂತಕುಮಾರ್, ಸುಧಾಕರನ್&ಕೋಮಲಾ ದರ್ಶಿನಿ, ನರೇಶ&ಅಂಜು, ಪ್ರಿಯಾ&ಶಿವಕುಮಾರ್, ಲೇಖನಾ&ಸುರೇಶ್ಬಾಬು, ಶ್ವೇತಾ&ಹರೀಶ್, ಸವಿತಾ&ಆಂತೋನಿ ಒಂದಾದ ಜೋಡಿಗಳು.
ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಕಸ ಸಂಗ್ರಹಣೆಗೆಂದು ಹೋಗುವ ಸ್ವಚ್ಛ ವಾಹಿನಿಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿತ್ತು. ಅಲ್ಲದೇ ಬೆಸ್ಕಾಂ ಮತ್ತು ಬಿಎಸ್ಎನ್ಎಲ್ ಇಲಾಖೆಗೆ ಬಾಕಿ ಕಟ್ಟಬೇಕಾಗಿರುವ ಗ್ರಾಹಕರಿಗೆ ನೀಡುವ ಬಿಲ್ಗಳ ಹಿಂಬದಿಯಲ್ಲಿಯೂ ಲೋಕ ಅದಾಲತ್ ನಡೆಯುವ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು.
ಮೆಗಾ ಲೋಕ ಅದಾಲತ್ನಲ್ಲಿ 3ನೇ ಅಪರ ಸತ್ರ ನ್ಯಾಯಾಧೀಶ ಶಿವಕುಮಾರ್, ಹಿರಿಯ ಶ್ರೇಣಿ ನ್ಯಾಯಾಧೀಶ ಮುಜಫರ್ ಎ ಮಾಂಜರಿ, ನ್ಯಾಯಾಧೀಶೆ ಜಯಲಕ್ಷಿ$್ಮ, 1ನೇ ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ವಿನೋದ್ಕುಮಾರ್, ನ್ಯಾಯಾಧೀಶೆ ಶಮಿದ ಇದ್ದರು.