1.69 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ನಿಮ್ಮ ಅಕೌಂಟ್‌ಗೆ ಹಣ ಹಾಕುತ್ತೇವೆ ಬಿಡಿಸಿಕೊಳ್ಳಿ ಎಂದು ಹೇಳಿ ಒಟಿಪಿ ಪಡೆದ ವಂಚಕರು, ನಗರದ ಲೆಕ್ಕಪರಿಶೋಧಕರೊಬ್ಬರಿಂದ 1.69 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಿರಂಜನ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. 3,100 ರೂ. ನಿಮ್ಮ ಖಾತೆಗೆ ಹಾಕಿದ್ದೇವೆ ಬಿಡಿಸಿಕೊಳ್ಳಿ ಎಂದು ನಂಬಿಸಿದ ವಂಚಕರು ಒಟಿಪಿ ಪಡೆದಿದ್ದಾರೆ. ನಂತರ 1,69,261 ರೂ. ನಿರಂಜನರ ಅವರ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net