

ನಂಜನಗೂಡು : ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದಲ್ಲಿ ಮಂಗಳವಾರ ದೇವಾಲಯದ 35 ಹುಂಡಿಗಳನ್ನು ತೆರೆದು ಭಕ್ತರು ನೀಡಿರುವ ಕಾಣಿಕೆಯ ಎಣಿಕೆ ಕಾರ್ಯ ನಡೆಸಲಾಯಿತು. ದೇವಾಲಯಕ್ಕೆ 1.69 ಕೋಟಿ ರೂ. ಆದಾಯ ಲಭ್ಯವಾಗಿದೆ. ನಗದು 1,69,69,867 ರೂ., ಚಿನ್ನ 134 ಗ್ರಾಂ, ಬೆಳ್ಳಿ 2.350 ಕೆ.ಜಿ ಹಾಗೂ 23 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ.
ದೇವಾಲಯದ ದಾಸೋಹ ಭವನದಲ್ಲಿ ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳಾ ಸದಸ್ಯರು, ಬ್ಯಾಂಕ್ ಅಫ್ ಬರೋಡ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ನೆರವಾದರು.
ಈ ಸಂದರ್ಭದಲ್ಲಿ ದೇವಾಲಯದ ಇಒ ಜಗದೀಶ್ ಕುಮಾರ್, ಮುಜರಾ ಇಲಾಖೆ ತಹಸೀಲ್ದಾರ್ ವಿದ್ಯೂಲ್ಲತಾ, ಎಇಒ ಸತೀಶ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಕ್ ಅಫ್ ಬರೋಡ ವ್ಯವಸ್ಥಾಪಕ ಟಿ.ಕೆ.ನಾಯಕ್ ಉಪಸ್ಥಿತರಿದ್ದರು.