1.68 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಆನ್‌ಲೈನ್ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದ ವ್ಯಕ್ತಿಯಿಂದ ಅಪರಿಚಿತರು 1.68 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಅಮಿತ್ ವಂಚನೆಗೆ ಒಳಗಾದವರು. ಹರಿಯಾಣದ ಅಜಯಕುಮಾರ ಎಂಬಾತ ಬುಕ್ಕಿಂಗ್ ಮಾಡಿದ ಸ್ಕೂಟರ್ ಕಳುಹಿಸಿ ಕೊಡುವುದಾಗಿ ನಂಬಿಸಿ, ಫೇಕ್ ರಶೀದಿ ಕಳುಹಿಸಿದ್ದಾನೆ. ಇದನ್ನು ನಂಬಿದ ಅಮಿತ್, 1,68,051 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net