

ಕಬ್ಬೂರು: ಜಾಗನೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆರ್ಥಿಕ ವರ್ಷದಲ್ಲಿ 1.57 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕ ರವೀಂದ್ರ ಅಲಗೂರೆ ಹೇಳಿದರು.
ಸಮೀಪದ ಜಾಗನೂರ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 71ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ 2,692 ಸದಸ್ಯರಿದ್ದು, 1.73 ಕೋಟಿ ರೂ. ಷೇರು ಬಂಡವಾಳ, 41.88 ಕೋಟಿ ರೂ. ಠೇವು, 7.31 ಕೋಟಿ ರೂ. ನಿಧಿ, 59.61 ಕೋಟಿ ರೂ. ಸಾಲ ವಿತರಿಸಿದ್ದು, 74.52 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಶಿಕ್ಷಕ ಸುರೇಶ ಕರಾಡೆ ಮಾತನಾಡಿ, ಜಾಗನೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮಾದರಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸಕಾಲಕ್ಕೆ ಸಾಲ ಮರುಪಾವತಿಸಬೇಕು ಎಂದು ಹೇಳಿದರು.
ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಸಂಘದ ಅಧ್ಯಕ್ಷ ಹನುಮಂತ ಕರೀಕಟ್ಟಿ, ಉಪಾಧ್ಯಕ್ಷ ಮುತ್ತಪ್ಪ ಹನುಮನ್ನವರ, ಪರಸಪ್ಪ ಹನುಮನ್ನವರ, ಪಾಂಡುರಂಗ ಹನಜಾನಟ್ಟಿ, ರಾಮಪ್ಪ ಧರ್ಮಟ್ಟಿ, ಶಂಭಣ್ಣ ಹುಕ್ಕೇರಿ, ಸಂತೋಷ ಆಕಳೆ, ಗದಿಗೆಪ್ಪ ಆದರಗಿ, ಜ್ಞಾನೇಶ್ವರ ಮರಾಠೆ, ನೀಲಪ್ಪ ಚೌಲಗೇರ, ಉದ್ದವ್ವ ತಿಗಡಿ, ಸಾಂವಕ್ಕ ಮುಸೆಪ್ಪಗೋಳ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಮಲ್ಲೇಶ ಹನುಮಂತಗೋಳ, ನಿವೃತ್ತ ಉಪಪ್ರಧಾನ ವ್ಯವಸ್ಥಾಪಕ ಡಿ.ಟಿ.ಕುಲಕರ್ಣಿ, ಹನುಮಂತ ರಬಕವಿ, ರಾಮಪ್ಪ ಪಕಾಟೆ,ಪರಸಪ್ಪ ಕರೀಕಟ್ಟಿ, ಹನುಮಂತ ತೇಸ್ತಿ, ಎಸ್.ಬಿ.ತೇರದಾಳೆ, ಬಿ.ಎಸ್.ನಸಲಾಪುರೆ ಇತರರಿದ್ದರು.