1.54 ಲಕ್ಷ ಮೌಲ್ಯದ ಮದ್ಯ ವಶಕ್ಕೆ

19 Crime 01
Published on

ಕಲಬುರಗಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಸೇರಿ ಇತರ ಎಲ್ಲೆಡೆ ತಪಾಸಣೆ ಸಿಬ್ಬಂದಿ ಗಸ್ತು ಚುರುಕುಗೊಳಿಸಿದ್ದು, ೨೧೪ ಲೀಟರ್ ಮದ್ಯ, ವಿವಿಧ ಬ್ರಾÈಂಡ್‌ಗಳ ೧೧೭ ಲೀಟರ್ ಬೀಯರ್ ವಶಕ್ಕೆ ಪಡೆದಿದ್ದಾರೆ.
ಯಡ್ರಾಮಿ ತಾಲೂಕಿನ ಎಸ್.ಎನ್.ಹಿಪ್ಪರಗಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಭಾನುವಾರ ವಾಹನ ತಪಾಸಣೆ ವೇಳೆ ಕಾರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಪತ್ತೆ ಹಚ್ಚಿ, ಮದ್ಯ ಸಹಿತ ಕಾರ್‌ನ್ನು ವಶಕ್ಕೆ ಪಡೆದಿದ್ದಾರೆ. ಮಂದೇವಾಲ್ ಗ್ರಾಮದ ಕಡೆಯಿಂದ ಎಸ್.ಎನ್.ಹಿಪ್ಪರಗಾ ಗ್ರಾಮದತ್ತ ಬರುತ್ತಿದ್ದ ಮಾರುತಿ ಸುಜಕಿ ಕಾರ್‌ನಲ್ಲಿ ಅಕ್ರಮವಾಗಿ ವಿವಿಧ ಬ್ರಾÈಂಡ್‌ಗಳ ೧,೫೪,೯೫೨ ರೂ. ಮೌಲ್ಯದ ೨೧೪ ಲೀಟರ್ ಮದ್ಯ, ವಿವಿಧ ಬ್ರಾÈಂಡ್‌ಗಳ ೧೧೭ ಲೀಟರ್ ಬಿಯರ್, ಮೂರು ಲಕ್ಷ ರೂ. ಮೌಲ್ಯದ ಕಾರ್‌ನ್ನು ಸಿಪಿಐ ಕವಿತಾ ನೇತೃತ್ವದ ಅಬಕಾರಿ ತನಿಖಾ ತಂಡ ಕಾರ್ ಸಮೇತ ಮದ್ಯ ವಶಕ್ಕೆ ಪಡೆದಿದೆ. ಕಾರ್ ಚಾಲಕ ಯಡ್ರಾಮಿ ತಾಲೂಕಿನ ರವಿಕುಮಾರ ಹುಣಚಾಳ ವಿರುದ್ಧ ಅಬಕಾರಿ ಇಲಾಖೆ ಉಪ ವಿಭಾಗ ಕಚೇರಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net